ಬೆಂಗಳೂರು:ಕೋವಿಡ್ ಕಾರಣ ತಾತ್ಕಾಲಿಕವಾಗಿ ಬಂದ್ ಆಗಿದ್ದ ಕೆ.ಆರ್ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯ ವ್ಯಾಪಾರ ವಹಿವಾಟಿಗಿದ್ದ ನಿರ್ಬಂಧ ತೆರವುಗೊಳಿಸಲು ಬಿಬಿಎಂಪಿ ಆದೇಶ ಹೊರಡಿಸಿದೆ. ಆದರೆ ಕೆಲವು ಷರತ್ತುಗಳೊಂದಿಗೆ ವ್ಯಾಪಾರ ಪುನರಾರಂಭಿಸಲು ಸೂಚಿಸಿದೆ.
ಕೆ.ಆರ್ ಮಾರ್ಕೆಟ್-ಕಲಾಸಿಪಾಳ್ಯ ಮಾರುಕಟ್ಟೆ ವ್ಯಾಪಾರ ಪುನರಾರಂಭ: ಷರತ್ತುಗಳು ಅನ್ವಯ
ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಕೆ.ಆರ್ ಮಾಕುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳು ಪುನಃ ಪ್ರಾರಂಭವಾಗಲಿವೆ.
ಕೆಆರ್ ಮಾರ್ಕೆಟ್
ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದ್ದರಿಂದ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಿ ವ್ಯಾಪಾರ ವಹಿವಾಟಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿದೆ.
ಬಿಬಿಎಂಪಿ ನೀಡಿರುವ ಷರತ್ತುಗಳು ಹೀಗಿವೆ..
- ಕೋವಿಡ್ -19 ಮಾರ್ಗಸೂಚಿ ತಪ್ಪದೇ ಪಾಲಿಸುವುದು.
- ವ್ಯಾಪಾರಸ್ಥರು- ಸಾರ್ವಜನಿಕರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು.
- ಅಂಗಡಿಗಳ ಮುಂದೆ ಹಳದಿ ಬಣ್ಣದ ಬಾಕ್ಸ್‌ನಲ್ಲಿ ನಿಂತು ಸಾರ್ವಜನಿಕರು ವ್ಯಾಪಾರ ನಡೆಸಬೇಕು.
- ಟೆಸ್ಟಿಂಗ್ ಹಾಗೂ ಲಸಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.
- ಅಂಗಡಿ ಒಳಗಡೆ ಹಾಗೂ ಆವರಣದಲ್ಲಿ ಶುಚಿತ್ವ ಕಾಪಾಡುವುದು.
- ತಾಪಮಾನ ಸ್ಕ್ಯಾನ್ ಮಾಡಲು ಕ್ರಮ ವಹಿಸುವುದು.
- ಈ ನಿಯಮ ಉಲ್ಲಂಘಿಸಿದ್ದಲ್ಲಿ ನಿಯಮಾವಳಿ ರೀತಿ ದಂಡ