ಕರ್ನಾಟಕ

karnataka

ETV Bharat / city

ನಾಳೆ ಕರ್ನಾಟಕ ಬಂದ್: ಬೆಂಗಳೂರಲ್ಲಿ ಹದ್ದಿನ ಕಣ್ಣಿಡಲು ಪೊಲೀಸರಿಗೆ​ ಪಂತ್​ ಸೂಚನೆ - ಬಿಗಿ​ ಬಂದೋಬಸ್ತ್​ಗೆ ಪಂತ್​ ಸೂಚನೆ

ನಾಳೆ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಬಂದ್ ಮಾಡುತ್ತಿದ್ದು, ಈ ವೇಳೆ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ.

ಬಿಗಿ​ ಬಂದೋಬಸ್ತ್​
ಬಿಗಿ​ ಬಂದೋಬಸ್ತ್​

By

Published : Dec 4, 2020, 10:58 AM IST

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ನಾಳೆ ಬಂದ್​ಗೆ ಕರೆ ನೀಡಿದ್ದು, ಸೂಕ್ತ ಬಂದೋಬಸ್ತ್​ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತರು, ಸಿಸಿಬಿ ಜಂಟಿ ಆಯುಕ್ತರು ಮತ್ತು ಎಲ್ಲಾ ವಿಭಾಗದ ಡಿಸಿಪಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ನಾಳೆಯ ಬಂದ್​ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಎಲ್ಲಾ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಬಂದ್​ ವೇಳೆ ಹಿಂಸಾಚಾರ ನಡೆಸುವಂತಿಲ್ಲ. ಯಾವುದೇ ಗಲಾಟೆ, ಕಲ್ಲು ತೂರಾಟಕ್ಕೆ ಆಸ್ಪದ ನೀಡಬಾರದು, ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದರೆ ಕ್ರಮ ಕೈಗೊಳ್ಳಿ, ಹಾಗೆಯೇ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿ ನಾಶ ಮಾಡುವಂತಿಲ್ಲ. ಕಿಡಿಗೇಡಿಗಳನ್ನು ವಶಕ್ಕೆ ಪಡೆಯಿರಿ ಎಂದು ಪಂತ್ ಸೂಚಿಸಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ಕೈ ಬಿಡುವಂತೆ ಕನ್ನಡ ಪರ ಸಂಘಟನೆಗಳು ಒತ್ತಾಯಿಸುತ್ತಿದ್ದು, ಹೀಗಾಗಿ ನಾಳೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿಗಳಿಗೆ ಮುತ್ತಿಗೆ ಹಾಕಲು ಹೋರಾಟಗಾರರು ನಿರ್ಧರಿಸಿದ್ದಾರೆ. ಮೈಸೂರು ಬ್ಯಾಂಕ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್ ಸೇರಿದಂತೆ ನಗರದ ಹಲವೆಡೆ ಬಂದ್ ಬಿಸಿ ಮುಟ್ಟಲಿದೆ.

ಇದನ್ನೂ ಓದಿ:ಡಿ. 5ರಂದು ಕರ್ನಾಟಕ ಬಂದ್: ಬಿಗಿಭದ್ರತೆಗೆ ಕಮಲ್​ ಪಂತ್​ ವಿಶೇಷ ಸೂಚನೆ

ABOUT THE AUTHOR

...view details