ಕರ್ನಾಟಕ

karnataka

ETV Bharat / city

ನಾಳೆ ರಾಜಧಾನಿ ಸಂಪೂರ್ಣ 'ಲಾಕ್​​​​​​​​'ಡೌನ್​: ಬೇಕಾಬಿಟ್ಟಿ ಓಡಾಡದಂತೆ ಬಿಬಿಎಂಪಿ ಎಚ್ಚರಿಕೆ

ಭಾನುವಾರ ಪೂರ್ಣ ಪ್ರಮಾಣದ ಲಾಕ್​ಡೌನ್​​ ಘೋಷಿಸಲಾಗಿದೆ. ಅಗತ್ಯ ವಸ್ತುಗಳು ಹೊರತುಪಡಿಸಿ ಎಲ್ಲವೂ ಬಂದ್​ ಆಗಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್​​​​ ಕುಮಾರ್ ಹೇಳಿದರು.

BBMP Commissioner BH Anil Kumar
ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್​​​​ ಕುಮಾರ್

By

Published : May 23, 2020, 6:14 PM IST

ಬೆಂಗಳೂರು:ಕೋವಿಡ್-19 ಲಾಕ್​​​​ಡೌನ್ 4.0 ಭಾಗವಾಗಿ ಪ್ರತೀ ಭಾನುವಾರ ಕರ್ಫ್ಯೂ ಮಾದರಿಯ ಪೂರ್ಣ ಪ್ರಮಾಣದ 'ಲಾಕ್​​ಡೌನ್'​​ ಜಾರಿಗೊಳಿಸಲಾಗಿದೆ. ಹೀಗಾಗಿ ನಾಳೆ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿದೆ.

ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಹೊರತುಪಡಿಸಿ ಹೊರಗಡೆ ಓಡಾಡದಂತೆ ಈಗಾಗಲೇ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಅವರು, ರಾಜ್ಯ ಸರ್ಕಾರದ ಸೂಚನೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆ ಸಂಪೂರ್ಣ ಲಾಕ್​​​​ಡೌನ್ ಹಾಕಲಾಗುತ್ತಿದೆ ಎಂದರು.

ಯಾರೊಬ್ಬರೂ ಮನೆಯಿಂದ ಹೊರಗೆ ಬರಬಾರದು. ಅಂಗಡಿ - ಮುಂಗಟ್ಟು ಮುಚ್ಚಲಾಗುವುದು. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ತೆರೆದಿಡಲಾಗುವುದು. ಮೊದಲ ಲಾಕ್​​​​​​ಡೌನ್ ಹೇಗಿತ್ತೋ ಹಾಗೆಯೇ ನಿರ್ಬಂಧ ಇರಲಿದೆ. ಮೆಡಿಕಲ್ ತುರ್ತು ಪರಿಸ್ಥಿತಿ, ಆಸ್ಪತ್ರೆಗಳಿಗೆ ಹೋಗಲು ಅವಕಾಶವಿದೆ. ಎಲ್ಲ ಮಾರುಕಟ್ಟೆ ಮುಚ್ಚಲಾಗುತ್ತದೆ ಎಂದರು.

ABOUT THE AUTHOR

...view details