ಕರ್ನಾಟಕ

karnataka

ETV Bharat / city

ನಾಳೆ 99% ಸಂಪುಟ ವಿಸ್ತರಣೆ ಆಗುತ್ತದೆ: ಬಿ.ಎಸ್.ಯಡಿಯೂರಪ್ಪ ಭರವಸೆ - ಬೆಂಗಳೂರು ಬಿ.ಎಸ್​ ಯಡಿಯೂರಪ್ಪ ನ್ಯೂಸ್​

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಾಲರ್ಸ್ ಕಾಲೋನಿಯ ಧವಲಗಿರಿ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ, ನಾಳೆ ಸಂಪುಟ ವಿಸ್ತರಣೆ 99% ಆಗುತ್ತದೆ ಎಂದು ಹೇಳಿದರು.

BS Yediyurappa
ಬಿ.ಎಸ್​ ಯಡಿಯೂರಪ್ಪ

By

Published : Jan 30, 2020, 12:58 PM IST

ಬೆಂಗಳೂರು: ನಾಳೆ ಸಂಪುಟ ವಿಸ್ತರಣೆ 99% ಆಗುತ್ತದೆ ಎಂದುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್​ ಯಡಿಯೂರಪ್ಪ

ಇಂದು ರಾತ್ರಿ 9 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭೇಟಿಗೆ ಸಮಯ ಕೊಟ್ಟಿದ್ದಾರೆ. ರಾತ್ರಿ 10 ಗಂಟೆಗೆ ಅಮಿತ್ ಶಾ ಭೇಟಿ ಮಾಡುತ್ತೇನೆ. ಇದಾದ ನಂತರ ಪ್ರಧಾನಿಗಳನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ದೆಹಲಿಯ ಭೇಟಿಯ ಬಗ್ಗೆ ಮಾತನಾಡಿದರು.

ನಾಳೆ ಸಂಪುಟ ವಿಸ್ತರಣೆ ಆಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, 99% ನಾಳೆಯೇ ಎಲ್ಲಾ ಕ್ಲಿಯರ್ ಆಗುತ್ತೆ ಎಂದು ಹೇಳಿದರು.

ABOUT THE AUTHOR

...view details