ಕರ್ನಾಟಕ

karnataka

ETV Bharat / city

ಪುನೀತ್​ ರಾಜಕುಮಾರ್ ಫೋಟೋಗೆ ನಮಿಸಿದ ಆಪ್ತಮಿತ್ರ ಅಲ್ಲು ಅರ್ಜುನ್​! - ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಸುದ್ದಿ

ದಿವಂಗತ ನಟ ಪುನೀತ್​ ರಾಜಕುಮಾರ್​ ಮನೆಗೆ ಭೇಟಿ ನೀಡಲು ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಬೆಂಗಳೂರಿಗೆ ಆಗಮಿಸಿದ್ದು, ಅದರಂತೆ ಪುನೀತ್​ ರಾಜಕುಮಾರ್​ ಮನೆಗೆ ಭೇಟಿ ಪುನೀತ್​ ಫೋಟೋಗೆ ನಮಿಸಿದ್ದಾರೆ.

Tollywood star Allu Arjun visit to Puneeth Rajkumar home, Allu Arjun visit to Puneeth Rajkumar home in Bangalore, Puneeth Rajkumar best friend Allu Arjun, Puneeth Rajkumar news, Icon Star Allu Arjun news, ಪುನೀತ್​ ರಾಜ್​ಕುಮಾರ್​ ಮನೆಗೆ ಟಾಲಿವುಡ್​ ಸ್ಟಾರ್​ ಅಲ್ಲು ಅರ್ಜುನ್​ ಭೇಟಿ, ಬೆಂಗಳೂರಿನ ಪುನೀತ್​ ರಾಜ್​ಕುಮಾರ್​ ಮನೆಗೆ ಅಲ್ಲು ಅರ್ಜುನ್​ ಭೇಟಿ, ಪುನೀತ್​ ರಾಜ್​ಕುಮಾರ್​ ಆಪ್ತ ಮಿತ್ರ ಅಲ್ಲು ಅರ್ಜುನ್​, ಪುನೀತ್​ ರಾಜಕುಮಾ್​ ಸುದ್ದಿ, ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಸುದ್ದಿ,
ಪುನೀತ್​ ರಾಜಕುಮಾರ್ ಫೋಟೋಗೆ ನಮಿಸಿದ ಆಪ್ತಮಿತ್ರ ಅಲ್ಲು ಅರ್ಜುನ್​!

By

Published : Feb 3, 2022, 12:51 PM IST

Updated : Feb 3, 2022, 3:43 PM IST

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ದೊಡ್ಡ ಆಸ್ತಿ ಅಂದರೆ ಸ್ನೇಹಿತರು. ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲ. ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ಪುನೀತ್ ರಾಜ್‌ಕುಮಾರ್‌ಗೆ ಉತ್ತಮ ಸ್ನೇಹಿತರಿದ್ದಾರೆ. ಇದೇ ಕಾರಣಕ್ಕೆ ಪುನೀತ್ ಅಗಲಿ ಮೂರು ತಿಂಗಳ ಬಳಿಕವೂ ನಟ ಅಲ್ಲು ಅರ್ಜುನ್​ ಅಪ್ಪು ಮನೆಗೆ ಭೇಟಿ ನೀಡಿದ್ದಾರೆ.

ಪುನೀತ್​ ರಾಜಕುಮಾರ್ ಫೋಟೋಗೆ ನಮಿಸಿದ ಆಪ್ತಮಿತ್ರ ಅಲ್ಲು ಅರ್ಜುನ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ಹಿನ್ನೆಲೆ ತೆಲುಗು ನಟ ಅಲ್ಲು ಅರ್ಜುನ್​ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಹೆಚ್​ಎಎಲ್ ಏರ್​ಪೋರ್ಟ್​ಗೆ ಬಂದಿಳಿದ ಅಲ್ಲು ಅರ್ಜುನ್​ ಮೊದಲಿಗೆ ನಾಗಾವರದಲ್ಲಿರುವ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದರು.

ಶಿವಣ್ಣ ಕುಟುಂಬಕ್ಕೆ ಭೇಟಿ ನೀಡಿದ ಅಲ್ಲು ಅರ್ಜುನ್​

ಬಳಿಕ ಶಿವರಾಜ್ ಕುಮಾರ್​ ಜೊತೆ ಸೇರಿ ನೇರ ಸದಾಶಿವ ನಗರದಲ್ಲಿರುವ ಅಪ್ಪು ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿ ಅಪ್ಪು ಫೋಟೋಗೆ ನಮಿಸಿದ ಅಲ್ಲು ಅರ್ಜುನ್​ ಪುನೀತ್​ ಪತ್ನಿ ಜೊತೆ ಮಾತುಕತೆ ನಡೆಸಿ ಸಮಾಧಾನ ಹೇಳಿದರು. ಅಪ್ಪು ಅಗಲಿದ ದಿನದಿಂದ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರು ಆಗಮಿಸಿ ಪುನೀತ್ ಕುಟುಂಬಕ್ಕೆ ಸಮಾಧಾನ ಹೇಳುತ್ತಿದ್ದಾರೆ.

ಪುನೀತ್​ ರಾಜಕುಮಾರ್​ ಮನೆಗೆ ಭೇಟಿ ನೀಡಲು ಬೆಂಗಳೂರಿಗೆ ಬಂದ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್

ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಕೇಳಿ ಅಲ್ಲು ಅರ್ಜುನ್ 'ಪುಷ್ಪಕ ವಿಮಾನಂ' ಸಿನಿಮಾದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಭಾವುಕರಾಗಿದ್ದರು. ಪುನೀತ್ ರಾಜ್‌ಕುಮಾರ್ ಅವರು ನನಗೆ ಬಹಳ ಕಾಲದಿಂದ ಪರಿಚಯ. ನಮ್ಮ ಮನೆಗೆ ಬರುತ್ತಿದ್ದರು. ಅದೆಷ್ಟೋ ಬಾರಿ ನಾವು ಒಟ್ಟಿಗೆ ಕೂತು ಊಟ ಮಾಡಿದ್ದೇವೆ. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸವಿತ್ತು. ಆದ್ರೀಗ ದಿಢೀರನೇ ಅವರಿಲ್ಲ ಅಂದರೆ ತುಂಬಾ ನೋವಾಗುತ್ತದೆ ಎಂದು ಅಲ್ಲು ಅರ್ಜುನ್ ಭಾವುಕರಾಗಿದ್ದರು.

ಪುನೀತ್​ ರಾಜಕುಮಾರ್ ಫೋಟೋಗೆ ನಮಿಸಿದ ಆಪ್ತಮಿತ್ರ ಅಲ್ಲು ಅರ್ಜುನ್

ಅಪ್ಪು ಅಗಲಿದ ಮೂರು ತಿಂಗಳ ಬಳಿಕ ಈಗ ಅಲ್ಲು ಅರ್ಜುನ್​ ಅಪ್ಪು ನಿವಾಸಕ್ಕೆ ಮತ್ತೆ ಭೇಟಿ ನೀಡಿದ್ದಾರೆ.

ಪುನೀತ್​ ರಾಜಕುಮಾರ್ ಸಮಾಧಿಗೆ ನಮಿಸಿದ ಬಳಿಕ ಅಲ್ಲು ಅರ್ಜುನ್ ಪ್ರತಿಕ್ರಿಯೆ

ಇದನ್ನೂ ಓದಿ:'ಅಥರ್ವ'ನಾಗಿ ಎಂಎಸ್ ಧೋನಿ.. ಫಸ್ಟ್​ ಲುಕ್​ ರಿಲೀಸ್​

Last Updated : Feb 3, 2022, 3:43 PM IST

ABOUT THE AUTHOR

...view details