ಬೆಂಗಳೂರು: ರಾಜ್ಯದಲ್ಲಿಂದು 10,118 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 139 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,874 ಕ್ಕೆ ಏರಿಕೆ ಆಗಿದೆ. ಇಂದು 55 ಮಂದಿ ಡಿಸ್ಚಾರ್ಜ್ ಆಗಿದ್ದು, 39,05,096 ಜನ ಗುಣಮುಖರಾಗಿದ್ದಾರೆ.
ಇಂದು ಸೋಂಕಿಗೆ ಯಾರೂ ಮೃತಪಟ್ಟಿಲ್ಲ. ಇದುವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ 40,057 ಆಗಿದೆ. ಸದ್ಯ 1679 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.1.37 ರಷ್ಟಿದೆ. ವಿಮಾನ ನಿಲ್ದಾಣದಿಂದ ಇಂದು 2739 ಮಂದಿ ಸೇರಿದಂತೆ ಇದುವರೆಗೂ 83,1869 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 23 ಜಿಲ್ಲೆಯಲ್ಲಿಂದು ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ.