ಬೆಂಗಳೂರು: ರಾಜ್ಯದಲ್ಲಿಂದು 29,744 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 13,68,945 ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 29,744 ಮಂದಿಗೆ ಕೋವಿಡ್ ಪಾಸಿಟಿವ್: ಮಹಾಮಾರಿಗೆ 201 ಜನ ಬಲಿ - Karnataka lockdown
ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಲೇ ಇವೆ. ಇಂದು 29 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, 201 ಜನ ಮೃತಪಟ್ಟಿದ್ದಾರೆ.
![ರಾಜ್ಯದಲ್ಲಿಂದು 29,744 ಮಂದಿಗೆ ಕೋವಿಡ್ ಪಾಸಿಟಿವ್: ಮಹಾಮಾರಿಗೆ 201 ಜನ ಬಲಿ COVID](https://etvbharatimages.akamaized.net/etvbharat/prod-images/768-512-11547877-thumbnail-3x2-corona.jpg)
COVID
ಇತ್ತ ಸಾವಿನ ಸಂಖ್ಯೆಯೂ ಏರಿಕೆ ಆಗಿದ್ದು, 201 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 14,627ಕ್ಕೆ ಏರಿಕೆ ಆಗಿದೆ. ಇಂದು 10,663 ಮಂದಿ ಗುಣಮುಖರಾಗಿದ್ದು, ಈವರೆಗೆ 10,73,257 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸಕ್ರಿಯ ಪ್ರಕರಣಗಳು 2,81,042 ಕ್ಕೆ ಏರಿದ್ದು, 1815 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು 17.87 ರಷ್ಟು ಇದ್ದು, ಸಾವಿನ ಶೇಕಡಾವಾರು ಪ್ರಮಾಣ 0.67 ರಷ್ಟು ಇದೆ. ಇಂದು ಯುಕೆಯಿಂದ 143 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ.