ಕರ್ನಾಟಕ

karnataka

ETV Bharat / city

ರಾಜ್ಯಾದ್ಯಂತ ಕೊರೊನಾ ರಣಕೇಕೆ : ಒಂದೇ ದಿನದಲ್ಲಿ 25 ಸಾವಿರ ಗಡಿ ದಾಟಿದ ಕೋವಿಡ್​ ಕೇಸ್​!

ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಹಾಮಾರಿ ಸೋಂಕಿನ ಆರ್ಭಟ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಲ್ಲಿ 15,244 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಇಂದು 25 ಸಾವಿರ ಗಡಿ ದಾಟಿದ ಕೊರೊನಾ
ರಾಜ್ಯದಲ್ಲಿ ಇಂದು 25 ಸಾವಿರ ಗಡಿ ದಾಟಿದ ಕೊರೊನಾ

By

Published : Apr 22, 2021, 7:51 PM IST

Updated : Apr 23, 2021, 3:05 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 25,795 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12,47,997ಕ್ಕೆ ಏರಿಕೆ ಆಗಿದೆ.

ಕಳೆದ 24 ಗಂಟೆಗಳಲ್ಲಿ 123 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13,885ಕ್ಕೆ ಏರಿದೆ.‌ 5,624 ಮಂದಿ ಚೇತರಿಸಿಕೊಂಡಿದ್ದು, ಇಲ್ಲಿಯವರೆಗೆ 10,37,857 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 1,96,236 ಕ್ಕೆ ಏರಿಕೆಯಾಗಿದೆ.

ರಾಜ್ಯಾದ್ಯಂತ ಕೊರೊನಾ ರಣಕೇಕೆ

243 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಶೇಕಡಾವಾರು 15.87ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.47ರಷ್ಟಿದೆ.

ಬೆಂಗಳೂರಲ್ಲಿ ಇಂದು 15,244 ಪ್ರಕರಣಗಳು ಪತ್ತೆಯಾಗಿದ್ದು, 68 ಜನ ಮೃತಪಟ್ಟಿದ್ದಾರೆ.

ರಾಜ್ಯಾದ್ಯಂತ ಕೊರೊನಾ ರಣಕೇಕೆ
Last Updated : Apr 23, 2021, 3:05 AM IST

ABOUT THE AUTHOR

...view details