ಕರ್ನಾಟಕ

karnataka

ETV Bharat / city

COVID 19 update: ರಾಜ್ಯದಲ್ಲಿಂದು 20,378 ಮಂದಿಗೆ ಸೋಂಕು ದೃಢ, 382 ಜನ ಬಲಿ - COVID 19 update,

ಜ್ಯದಲ್ಲಿಂದು 20,378 ಮಂದಿಗೆ ಸೋಂಕು ದೃಢಪಟ್ಟಿದ್ದರೆ, 382 ಜನ ಸಾವನ್ನಪ್ಪಿದ್ದಾರೆ. 28,053 ಸೋಂಕಿತರು ಗುಣಮುಖರಾಗಿದ್ದಾರೆ.

today-karnataka-state-corona-case-update-news
ರಾಜ್ಯದ ಕೊರೊನಾ ವರದಿ

By

Published : May 30, 2021, 7:45 PM IST

ಬೆಂಗಳೂರು:ರಾಜ್ಯದಲ್ಲಿಂದು 20,378 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 25,87,827 ಕ್ಕೆ ಏರಿಕೆ ಆಗಿದೆ.

ಓದಿ: ಸಮ್ಮತಿಯ ಸೆಕ್ಸ್​: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಎಸ್ಐಟಿಯಿಂದ ಸಿಗುತ್ತಾ ಕ್ಲೀನ್ ಚಿಟ್?

28,053 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 22,17,117 ಜನರು ಡಿಚ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 3,42,010 ರಷ್ಟು ಇದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು 14.68 % ರಷ್ಟು ಇದ್ದು, ಸಾವಿನ‌ ಶೇಕಡಾವಾರು ಪ್ರಮಾಣ 1.87 % ರಷ್ಟು‌ ಇದೆ.‌ ಕೋವಿಡ್ ಗೆ 382 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 28,679ಕ್ಕೆ ಏರಿದೆ. ವಿಮಾನ ನಿಲ್ದಾಣದಿಂದ 107 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.‌

ಬೆಂಗಳೂರಿನಲ್ಲಿ 4,734 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ 11,59,237 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 6078 ಗುಣಮುಖರಾಗಿದ್ದು, 9,83,507 ಜನರು ಡಿಸ್ಚಾರ್ಜ್ ಆಗಿದ್ದಾರೆ.‌ 213 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 13,104 ಕ್ಕೆ ಏರಿಕೆ ಆಗಿದೆ. ಸದ್ಯ 1,62,625 ಸಕ್ರಿಯ ಪ್ರಕರಣಗಳು ಬಾಕಿ ಇದೆ.

ABOUT THE AUTHOR

...view details