ಕರ್ನಾಟಕ

karnataka

ETV Bharat / city

ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ.. ಪುನೀತ್​ ಕೆರೆಹಳ್ಳಿ ಸೇರಿ ಮೂವರು ಆರೋಪಿಗಳು ಪೊಲೀಸ್​ ವಶಕ್ಕೆ - ಟಿಪ್ಪು ಸುಲ್ತಾನ್ ಭಾವಚಿತ್ರ

ಕೆ.ಆರ್‌.ಸರ್ಕಲ್ ಹಾಗೂ ಹಡ್ಸನ್​ ಸರ್ಕಲ್​​ನಲ್ಲಿ ಅಳವಡಿಸಿಸದ್ದ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಅನ್ನು ನಿನ್ನೆ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

torned Tippu Flex
ಟಿಪ್ಪು ಪ್ಲೆಕ್ಸ್​ ಹರಿದಿರುವುದು

By

Published : Aug 14, 2022, 2:54 PM IST

Updated : Aug 14, 2022, 3:55 PM IST

ಬೆಂಗಳೂರು :ನಗರದ ಕೆ ಆರ್.ಸರ್ಕಲ್ ಹಾಗೂ ಹಡ್ಸನ್​ ಸರ್ಕಲ್​ನಲ್ಲಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದ ಪ್ರಕರಣ ಸಂಬಂಧ ಕಿಡಿಗೇಡಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್​ನಿಂದ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್​ ಕೆರೆಹಳ್ಳಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಟಿಪ್ಪು ಸುಲ್ತಾನ್​ ಅವರ ಪ್ಲೆಕ್ಸ್ ಹರಿದ ಬಳಿಕ​ ರಾಜಾಜಿನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ್ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.

ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ

ಸ್ವಾತಂತ್ರದ ಅಮೃತ ಮಹೋತ್ಸವಕ್ಕೆ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ನಡಿಗೆ ಹಿನ್ನೆಲೆಯಲ್ಲಿ ಕೆ.ಆರ್‌. ಸರ್ಕಲ್ ಹಾಗೂ ಹಡ್ಸನ್​​ ಸರ್ಕಲ್​​ನಲ್ಲಿ ಟಿಪ್ಪು ಸುಲ್ತಾನ್ ಅವರ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದನ್ನು ವಿರೋಧಿಸಿ ಕಿಡಿಗೇಡಿಗಳು ಶನಿವಾರ ಟಿಪ್ಪು ಸುಲ್ತಾನ್ ಭಾವಚಿತ್ರ ಹರಿದು ಅಕ್ರೋಶ ವ್ಯಕ್ತಪಡಿಸಿದ್ದರು. ಈ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದರು.

ಸದ್ಯ ಹಲಸೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A ಕೋಮು ಸೌಹಾರ್ದತೆಗೆ ಧಕ್ಕೆ ಹಾಗೂ 295 A ಉದ್ದೇಶಪೂರ್ವಕವಾಗಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.

ಘಟನೆ ಸಂಬಂಧ ಕಾಂಗ್ರೆಸ್ ಮುಖಂಡ ಮನೋಹರ್ ಪ್ರತಿಕ್ರಿಯಿಸಿದ್ದು, ಟಿಪ್ಪು ಸುಲ್ತಾನ್ ಭಾವಚಿತ್ರ ಹರಿದು ಹಾಕಿದ್ದ ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ. ಈಗಾಗಲೇ ಹಲವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೆಲ ರಾಜಕೀಯ ವ್ಯಕ್ತಿಗಳು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯವರು ಇದುವರೆಗೂ ಬಂದು ದೂರು ನೀಡಿಲ್ಲ. ಕೇಸರಿ ಪರ ಎಂದು ಹೇಳುತ್ತಿದ್ದವರು ಇವತ್ತು ಸುಮ್ಮನಿದ್ದಾರೆ ಎಂದ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಸ್ವಾತಂತ್ರ್ಯ ದಿನ ಶಾಂತಿಯಿಂದ ಆಚರಿಸಬೇಕು, ಕಿಡಿಗೇಡಿ ಕೃತ್ಯಕ್ಕೆ ವಿಚಲಿತರಾಗಬೇಡಿ: ಡಿಕೆಶಿ

Last Updated : Aug 14, 2022, 3:55 PM IST

ABOUT THE AUTHOR

...view details