ಆನೇಕಲ್ :ಜೈಪುರದೊಡ್ಡಿ ಗ್ರಾಮದಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ತಡರಾತ್ರಿ ಹುಲಿಯೊಂದು ರಾಜ ಗಾಂಭೀರ್ಯದಿಂದ ನೆಡೆದುಕೊಂಡ ಹೋಗುತ್ತಿರುವ ದೃಶ್ಯ ಸೆರೆಯಾಗಿದ್ದು, ಅನಂತರ ಅದರ ಹಿಂದೆಯೇ ಕರಡಿಯೊಂದು ಕಾಣಿಸಿಕೊಂಡಿದೆ.
ಬನ್ನೇರುಘಟ್ಟ ಅರಣ್ಯವಾಸಿ ಹುಲಿಯೊಂದು, ರಾಗಿಹಳ್ಳಿ ಪಕ್ಕದ ಜೈಪುರದೊಡ್ಡಿಯ ಬಳಿ ಸುಳಿದಾಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಮೃಗಾಲಯದ ಹುಲಿಯೊಂದಿಗೆ ಕಾಡು ಹುಲಿ ಸೆಣಸಾಡಿ ಸುದ್ದಿಯಾಗಿತ್ತು. ಅರಣ್ಯದಂಚಿನ ಗ್ರಾಮಗಳ ಬಳಿ ಆಗಾಗ ಹುಲಿ ಹೆಜ್ಜೆಗಳು ಪತ್ತೆಯಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸುತ್ತಿದೆ.