ಬೆಂಗಳೂರು :ಟಿಕೆಟ್ ರಹಿತ ಸಂಚಾರ ಮಾಡಿದ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ವಲಯ ಭರ್ಜರಿ ಬಿಸಿ ಮುಟ್ಟಿಸಿದೆ. ಪ್ರಸಕ್ತ ವರ್ಷ 38,479 ಪ್ರಯಾಣಿಕರ ಮೇಲೆ ದಂಡ ಪ್ರಯೋಗ ಮಾಡುವ ಮೂಲಕ ₹2 ಕೋಟಿಗೂ ಅಧಿಕ ದಂಡ ಸಂಗ್ರಹ ಮಾಡಿದೆ.
ವಿಭಾಗವು ಕಳೆದ ವರ್ಷ ನವೆಂಬರ್ ತಿಂಗಳೊಂದರಲ್ಲೇ 6,910 ಟಿಕೆಟ್ ರಹಿತ ಪ್ರಯಾಣದ ಪ್ರಕರಣಗಳನ್ನು ದಾಖಲಿಸಿ 44,93,765 ದಂಡವನ್ನ ಸಂಗ್ರಹಿಸಿದೆ. ಏಪ್ರಿಲ್ ತಿಂಗಳಿನಿಂದ ನವೆಂಬರ್ವರೆಗೆ 1,66,981 ಪ್ರಕರಣಗಳನ್ನು ದಾಖಲಿಸುವ ಮೂಲಕ ವಿಭಾಗದ ಸಂಚಿತ ಟಿಕೆಟ್ ಪರಿಶೀಲನೆಯ ಅದಾಯವು 9,33,12,980 ಆಗಿದೆ.
ರೈಲ್ವೆ ಕಾಯಿದೆ 1989 ಸೆಕ್ಷನ್ 138ರ ಪ್ರಕಾರ, ಯಾವುದೇ ಪ್ರಯಾಣಿಕರು ಪಾಸ್/ಟಿಕೆಟ್ ಇಲ್ಲದೇ ಪ್ರಯಾಣಿಸುವುದು ಕಂಡು ಬಂದಲ್ಲಿ ಶುಲ್ಕಕ್ಕೆ ಸಮನಾದ (ಅವರು ಪ್ರಯಾಣಿಸಿದ ದೂರಕ್ಕೆ ಒಂದು ಪಟ್ಟು ಸಾಮಾನ್ಯ ದರ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಪ್ರಯಾಣಿಸಿದವರೆಗಿನ ದರ) ಹೆಚ್ಚುವರಿ ಶುಲ್ಕಗಳ ಜೊತೆ 250 ರೂಪಾಯಿ ಸೇರಿ, ಯಾವುದು ಹೆಚ್ಚು ಅದನ್ನು ವಿಧಿಸಲಾಗುತ್ತದೆ.