ಬೆಂಗಳೂರು :ಭಗವದ್ಗೀತೆ ಮತ್ತು ಕುರಾನ್ ಅನ್ನು ಅಧ್ಯಯನಕ್ಕೆ ಒಳಪಡಿಸಿ, ಅವುಗಳಲ್ಲಿ ಒಳ್ಳೆಯ ಸಂಗತಿಗಳಿದ್ದರೆ ಅವುಗಳನ್ನು ಅಳವಡಿಸಿಕೊಳ್ಳಿ, ಒಂದು ವೇಳೆ ಅವುಗಳಲ್ಲಿ ಕೆಟ್ಟ ಸಂಗತಿಗಳಿದ್ದರೆ ಎರಡನ್ನೂ ಅರಬ್ಬೀ ಸಮುದ್ರಕ್ಕೆ ಬಿಸಾಕಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದರು.
ವಿಧಾನಸೌಧದಲ್ಲಿ ಹಲಾಲ್ ಬ್ಯಾನ್ ವಿಚಾರವಾಗಿ ಮಾತನಾಡಿದ ಅವರು, ಹಲಾಲ್ ಮಾಂಸ ಉಪಯೋಗಿಸಿ ಅಂತಾ ಹೇಳುವುದಕ್ಕೆ ಹೇಗೆ ರೈಟ್ಸ್ ಇದೆಯೋ, ಹಾಗೇ ಅದನ್ನು ಬಹಿಷ್ಕರಿಸಿ ಅಂತಾ ಹೇಳುವ ರೈಟ್ಸ್ ನಮಗೆ ಇದೆ. ಹಲಾಲ್ ಅಂದ್ರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತೇನಾದ್ರು ಇದೆಯಾ? ಸಾಮರಸ್ಯವನ್ನು ಹೇರೋದಕ್ಕೆ ಬರೋದಿಲ್ಲ.
ಹಾಗಂತಾ, ಸಾಮರಸ್ಯ ಒನ್ ವೇ ಅಲ್ಲ ಅದು ಟೂ ವೇ. ಹಲಾಲ್ ಇಲ್ಲದ ಮಾಂಸ ಅವರು ತಿನ್ನೋದಕ್ಕೆ ರೆಡಿಯಾದ್ರೆ ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲ ಈಗಲೂ ಒಪ್ಪಿಕೊಳ್ಳಲು ಆಗುತ್ತಾ? ಎಂದು ಪ್ರಶ್ನಿಸಿದರು. ಹಲಾಲ್ ಅನ್ನೋದು ಒಂದು ಆರ್ಥಿಕ ಜಿಹಾದ್. ಆರ್ಥಿಕ ಜಿಹಾದ್ ಅಂದ್ರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತಾ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ.