ಬೆಂಗಳೂರು:ಕ್ಯಾಷಿಯರ್ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡಿರುವ ಘಟನೆ ನಾಗವಾರದ ಚಾಣಕ್ಯ ಸರ್ಕಲ್ ಸ್ಪಾಟ್ ಆನ್ ಕೆಫೆಯಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ...ದೃಶ್ಯ ಸಿಸಿಟಿವಿಯಲ್ಲಿ ಸೆರೆ - undefined
ಸ್ಪಾಟ್ ಅನ್ ಕೆಫೆಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಕ್ಯಾಷಿಯರ್ನ ಗಮನವನ್ನು ಬೇರೆ ಕಡೆ ಸೆಳೆದು ಆತ ಬೇರೆ ಗ್ರಾಹಕರ ಜೊತೆ ವಹಿವಾಟು ನಡೆಸುತ್ತಿದ್ದ ವೇಳೆ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಾಗವಾರದ ಚಾಣಕ್ಯ ಸರ್ಕಲ್ನಲ್ಲಿ ನಡೆದಿದೆ.
![ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ...ದೃಶ್ಯ ಸಿಸಿಟಿವಿಯಲ್ಲಿ ಸೆರೆ](https://etvbharatimages.akamaized.net/etvbharat/prod-images/768-512-3332233-thumbnail-3x2-bng.jpg)
Bangalore
ಕಳ್ಳನ ಕಳ್ಳತನ ಸಿಸಿಟಿವಿಯಲ್ಲಿ ಸೆರೆ
ಸ್ಪಾಟ್ ಆನ್ ಕೆಫೆಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಕ್ಯಾಷಿಯರ್ನ ಗಮನವನ್ನು ಬೇರೆ ಕಡೆ ಸೆಳೆದು ಆತ ಬೇರೆ ಗ್ರಾಹಕರ ಜೊತೆ ವಹಿವಾಟು ನಡೆಸುತ್ತಿದ್ದ ವೇಳೆ ಮೊಬೈಲ್ ಕಳ್ಳತನ ಮಾಡಿದ್ದಾನೆ. ಮೊಬೈಲ್ ಕಳ್ಳತನ ಮಾಡಿ ಅದನ್ನು ಬ್ಯಾಗ್ನ ಕೆಳಗೆ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.