ಬೆಂಗಳೂರು:ಕಂಪನಿ ವೆಬ್ ಸೈಟ್ ಡೇಟಾ ಅಳಿಸುವಂತೆ ಮಾಡಿ ಲಕ್ಷಾಂತರ ರೂಪಾಯಿಗೆ ನಷ್ಟಕ್ಕೆ ಕಾರಣವಾಗಿದ್ದ ವ್ಯಕ್ತಿಯನ್ನು ವಾಮ ಮಾರ್ಗದಿಂದ ಕರೆಯಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಬೆದರಿಸಿ ಸುಲಿಗೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕಿಡ್ನ್ಯಾಪ್ಗೆ ಒಳಗಾದ ಅಜಯ್ ಪಾಂಡೆ ಎಂಬಾತ ದೂರು ನೀಡಿದ ಮೇರೆಗೆ ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿದ್ದು ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದಾರೆ.
ಏನಿದು ಘಟನೆ:ಚೈತನ್ಯಬಾಣಸವಾಡಿಯಲ್ಲಿ ಲ್ಯಾಂಪ್ಸ್ ಕಾರ್ಟ್ ಕಂಪನಿಯ ಮಾಲೀಕನಾಗಿದ್ದ. ಉದ್ಯಮಕ್ಕೆ ವೆಬ್ಸೈಟ್ ಸಿದ್ದಪಡಿಸುವಂತೆ ಅಜಯ್ ಪಾಂಡೆಗೆ ಚೈ ಸೂಚಿಸಿದ್ದ. ಇದರಂತೆ ಪಾಂಡೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದ. ಒಂದು ವರ್ಷದ ತರುವಾಯ ನವೀಕರಣ ಹಾಗೂ ವೆಬ್ ನಿರ್ವಹಣೆಗಾಗಿ ಚೈತನ್ಯಗೆ ಹೆಚ್ಚುವರಿ ಹಣ ಕೇಳಿದ್ದ. ಆದರೆ, ಹಣ ನೀಡದ ಚೈತನ್ಯ ವಿರುದ್ಧ ಅಸಮಾನಧಾನಗೊಂಡ ಪಾಂಡೆ ವೆಬ್ಸೈಟ್ನಲ್ಲಿರುವ ಡೇಟಾ ಅಳಿಸಿ ಕಂಪ್ಲೀಟ್ ಶಟ್ಡೌನ್ ಆಗುವಂತೆ ಮಾಡಿದ್ದ. ಇದರಿಂದ ವ್ಯವಹಾರದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಚೈತ್ಯನ ಕೆಂಡಕಾರಿದ್ದ.