ಅಥಣಿ:ತಾಲೂಕಿನ ಹಲ್ಯಾಳ ಗ್ರಾಮದ ಸಮೀಪ ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರು ಸಹೋದರರ ಪೈಕಿ ಮಂಗಳವಾರ ಓರ್ವನ ಶವ ಪತ್ತೆಯಾಗಿತ್ತು. ಇಂದು ಮುಂಜಾನೆ ಮತ್ತೆ ಮೂವರ ಶವಗಳು ದೊರೆತಿವೆ.
ಜೂನ್ 28ರಂದು ಕೃಷ್ಣಾ ನದಿಗೆ ಹಾಸಿಗೆ ಒಗೆಯಲು ಹೋಗಿದ್ದ ನಾಲ್ವರು ಸಹೋದರರು ಕಾಲು ಜಾರಿ ನದಿಗೆ ಬಿದ್ದಿದ್ದರು. ಜೂನ್ 29ರಂದು ಪರಶುರಾಮ ಗೋಪಾಲ ಬನಸೋಡೆ (24) ಎಂಬಾತನ ಮೃತದೇಹ ಪತ್ತೆಯಾಗಿತ್ತು. ಇನ್ನುಳಿದ ಮೂವರು ಸಹೋದರರ ಮೃತದೇಹಗಳಿಗಾಗಿ ಎನ್‌ಡಿಆರ್‌ಎಫ್ ಮತ್ತು ಸ್ಕೂಬಾ ಡೈವಿಂಗ್ ತಂಡ 36 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಶವ ದೊರೆತಿರಲಿಲ್ಲ.