ಆನೇಕಲ್:ತಾಲೂಕಿನಲ್ಲಿ ಇಂದು ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಆನೇಕಲ್ನಲ್ಲಿ ಇಂದು ಮೂರು ಕೊರೊನಾ ಪ್ರಕರಣ ಪತ್ತೆ - Three corona case found in anekallu
ಇಂದು ಆನೇಕಲ್ನಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಳ್ಳಾರಿ ಮೂಲದ ಅಣ್ಣ, ತಮ್ಮ ಚಂದಾಪುರದ ಕೀರ್ತನ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದರು. ಇವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗೆಯೇ ಮಹಾರಾಷ್ಟ್ರದಿಂದ ಚಂದಾಪುರ ಸಮೀಪದ ಸೂರ್ಯ ಸಿಟಿಗೆ ಬಂದಿದ್ದ 21 ವರ್ಷದ ಯುವತಿಗೆ ಕೊರೊನಾ ದೃಢಪಟ್ಟಿದೆ.
ತಾಲೂಕು ಆರೋಗ್ಯಾಧಿಕಾರಿಗಳು ಈ ಮೂವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದು, ಸೂರ್ಯ ಸಿಟಿಯಲ್ಲಿನ ಶಾಸಕರ ಮನೆ ರಸ್ತೆಯನ್ನು ಸೀಲ್ ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ, ತಾಲೂಕು ಆಡಳಿತದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.