ಬೆಂಗಳೂರು : ಮದ್ಯದ ಅಮಲಿನಲ್ಲಿ ಪದೇ ಪದೇ ಕಿರಿಕ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಜೀವನ್ ಭಿಮಾ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಸಾಗರ್ ಹಾಗೂ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.
ಜೂನ್ 13 ರಂದು ಜೀವನ್ ಭಿಮಾ ನಗರದ ಬಿಡಿಎ ಲೇಔಟಿನಲ್ಲಿ ನೇಪಾಳ ಮೂಲದ ಸುಶೀಲ್ ಎಂಬಾತನ ಕೊಲೆ ನಡೆದಿತ್ತು. ಬ್ಯಾಂಕ್ ಸೀಜ್ ಮಾಡಿದ್ದ ಕಟ್ಟಡದಲ್ಲಿ ಸುಶೀಲ್ ಶವ ಪತ್ತೆಯಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಜೀವನ್ ಭಿಮಾ ನಗರ ಠಾಣಾ ಪೊಲೀಸರು ಸೆಕ್ಯುರಿಟಿ ಗಾರ್ಡ್ ಆಗಿದ್ದ ಸಾಗರ್ ಹಾಗೂ ಮತ್ತಿಬ್ಬರು ಅಪ್ರಾಪ್ತ ಆರೋಪಿಗಳ್ನು ಬಂಧಿಸಿದ್ದಾರೆ.