ಬೆಂಗಳೂರು:ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಾಮೂಹಿಕ ಪ್ರಯತ್ನ ನಡೆಸಲಿದ್ದೇವೆ, ಜನಾಶೀರ್ವಾದ ಪಡೆದುಕೊಳ್ಳಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇಲ್ಲದೆ ಇದ್ದರೂ ಸಹ ಸಾವಿರಾರು ಜನ ಬಂದು ಆಶೀರ್ವಾದ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ನವರ ಯಾವುದೇ ಬೂಟಾಟಿಕೆ ನಡೆಯೋದಿಲ್ಲ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶಕ್ತಿಮೀರಿ ಸಾಮೂಹಿಕ ಪ್ರಯತ್ನ ಮಾಡಲಿದ್ದೇವೆ. ಜನ ನಿಶ್ಚಿತವಾಗಿ ನಮಗೆ ಆಶೀರ್ವಾದ ಮಾಡಲಿದ್ದಾರೆ ಎನ್ನುವ ಭರವಸೆ ಇದೆ. ವಿಧಾನಮಂಡಲ ಅಧಿವೇಶನ ಆದನಂತರ ಪ್ರವಾಸ ಆರಂಭಿಸುತ್ತೇನೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ ಉಕ್ರೇನ್ನಲ್ಲಿ ಸಿಲುಕಿದವರ ರಕ್ಷಣೆ ನಮ್ಮ ಹೊಣೆ:
ರಷ್ಯಾ - ಉಕ್ರೇನ್ ಮಧ್ಯೆ ಯುದ್ಧ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್ವೈ, ಭಾರತೀಯರನ್ನ ಕರೆತರುವ ಎಲ್ಲ ರೀತಿಯ ಪ್ರಯತ್ನ ನಡೀತಿದೆ. ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ, ಯಾರು ಗಾಬರಿಯಾಗುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಸಕ್ತಿ ವಹಿಸಿ ವಿಮಾನಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ತಂದೆ ತಾಯಿಗಳು ಆತಂಕಕ್ಕೆ ಒಳಗಾಗದೆ ಸಹಕಾರ ನೀಡಬೇಕು. ಉಕ್ರೇನ್ನಲ್ಲಿರುವ ಕನ್ನಡಿಗರನ್ನು ಅವರವರ ಸ್ಥಳಕ್ಕೆ ವಾಪಸ್ ಕರೆತರುವ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ. ಅದರಲ್ಲಿ ನಾವೂ ಯಶಸ್ವಿಯಾಗಲಿದ್ದೇವೆ, ಹಾಗಾಗಿ ಎಲ್ಲರೂ ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ರೊಮೇನಿಯಾ ಗಡಿಯಲ್ಲಿ 5 ಸಾವಿರ ಭಾರತೀಯರು: ವಿದ್ಯಾರ್ಥಿಗಳ ಅಳಲು