ಬೆಂಗಳೂರು:ರಾಜಧಾನಿ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು, ಮಹಿಳೆಯರ ಸುರಕ್ಷತೆಗೆ ಹೊಸ ಯೋಜನೆ ಪೈಲಟ್ ಪ್ರಾಜೆಕ್ಟ್ ಜಾರಿಗೆ ತರುವ ಚಿಂತನೆಯಲ್ಲಿದ್ದಾರೆ. ಇದು ಪ್ರಮುಖ ಸ್ಥಳಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾದರೆ ಅಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತೆ.
ಈಗಾಗಲೇ ಇದು ಕಾರ್ಯನಿರ್ವಹಿಸುತ್ತಿದ್ದು, ಇದರ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರವೀಣ್ ಪ್ರಕಾಶ್ ಎಂಬ ಉದ್ಯೋಗಿಯ ತಂಗಿ ಏರ್ಪೋರ್ಟ್ನಿಂದ ಬರುವಾಗ ಆಕೆ ಸಹೋದರನಿಗಾಗಿ ಕಾಯುತ್ತಿದ್ದಳು. ಒಂಟಿಯಾಗಿ ಯುವತಿ ರಾತ್ರಿ ಇರೋದನ್ನ ಕಂಡ ಪೊಲೀಸರು ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ. ಇದನ್ನ ಕಂಡ ಅಣ್ಣ ಪ್ರವೀಣ್ ಪ್ರಕಾಶ್, ಸಿಟಿ ಪೊಲೀಸರನ್ನ ಶ್ಲಾಘಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಪೊಲೀಸರು ನಾವು 24*7 ನಿಮ್ಮೊಂದಿಗಿದ್ದೇವೆ ಎಂಬ ಭರವಸೆ ನೀಡಿದ್ದಾರೆ.
ಹೊಸ ಪೈಲಟ್ ಪ್ರಾಜೆಕ್ಟ್ ತರಲು ಚಿಂತನೆ: ಬೆಂಗಳೂರು ಪೊಲೀಸರ ಕೆಲಸಕ್ಕೆ ನೆಟ್ಟಿಗರ ಶಹಬ್ಬಾಶ್! - ಪ್ರವೀಣ್ ಪ್ರಕಾಶ್ ಎಂಬ ಉದ್ಯೋಗಿಯ ತಂಗಿ ಏರ್ಪೋರ್ಟ್ ನಿಂದ ಬರುವಾಗ
ರಾಜಧಾನಿ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು, ಮಹಿಳೆಯರ ಸುರಕ್ಷತೆಗೆ ಹೊಸ ಯೋಜನೆ ಪೈಲಟ್ ಪ್ರಾಜೆಕ್ಟ್ ಜಾರಿಗೆ ತರುವ ಚಿಂತನೆಯಲ್ಲಿದ್ದಾರೆ. ಇದು ಪ್ರಮುಖ ಸ್ಥಳಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾದರೆ ಅಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತೆ.
ಹಾಗೆಯೇ ನಿಲೋತ್ಪಲ್ ಮಿಶ್ರಾ ಎಂಬ ಮಹಿಳೆ ಒಂಟಿಯಾಗಿ ಏರ್ಪೋರ್ಟ್ನಿಂದ ಮನೆಗೆ ತೆರಳುವಾಗ ಅವರ ಕಾರು ಕೆಟ್ಟು ಹೋಗಿತ್ತು. ಇದೇ ವೇಳೆ, ಅಲ್ಲೇ ಇದ್ದ ಪೊಲೀಸರು ಮಿಶ್ರಾ ಕುಟುಂಬ ಬರುವವರೆಗೂ ಮಹಿಳೆಗೆ ರಕ್ಷಣೆ ಕೊಟ್ಟಿದ್ದಾರೆ. ಇದನ್ನ ಕಂಡ ಮಿಶ್ರಾ ಟ್ವಿಟರ್ನಲ್ಲಿ ಬೆಂಗಳೂರು ಪೊಲೀಸರಿಗೆ ಥ್ಯಾಂಕ್ಸ್ ತಿಳಿಸಿದ್ದು, ಇದಕ್ಕೆ ಬೆಂಗಳೂರು ಸಿಟಿ ಪೊಲೀಸರು ಪ್ರಿಯ ಮಿಶ್ರಾ ನಾವು ನಿಮ್ಮ ಕುಟುಂಬ ಸದಸ್ಯರಲ್ಲೊಬ್ಬರು ಜನ ಗಣ ಮನ ಎಂದು ಹೇಳುವ ಮೂಲಕ ವಿಭಿನ್ನವಾಗಿ ರಿಪ್ಲೈ ಮಾಡಿದ್ದಾರೆ.
ಹಾಗೆ ಮತ್ತೊಂದು ಕೇಸ್ ನೋಡುವುದಾದರೆ ಸ್ಯಾಂಕಿ ಕೆರೆ ಬಳಿ ಮಹಿಳೆ ನಡುರಾತ್ರಿ ಗಾಡಿಯಲ್ಲಿ ಹೋಗುವಾಗ ಅವರ ಹಿಂದೆಯೇ ಮತ್ತೊದು ದ್ವಿಚಕ್ರ ವಾಹನ ಬರುತ್ತಿತ್ತು. ಇದನ್ನು ನೋಡಿದ ಮಹಿಳೆ ಹೆದರಿದರಾದರೂ ತದನಂತರ ಅವರು ಪೊಲೀಸರು ಎಂದು ತಿಳಿದು ಸಂತಸ ಪಟ್ಟು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.