ಕರ್ನಾಟಕ

karnataka

ETV Bharat / city

ನಷ್ಟದ ಸುಳಿಯಲ್ಲಿರುವ ಬಿಎಂಟಿಸಿಯಿಂದ ಮತ್ತೊಮ್ಮೆ ದರ ಪರಿಷ್ಕರಣೆ ಪ್ರಸ್ತಾವನೆ‌ - ಬಿಎಂಟಿಸಿ ಟಿಕೆಟ್ ದರ ಏರಿಕೆ

ಕೋವಿಡ್ ಎಫೆಕ್ಟ್ ಒಂದು ಕಡೆಯಾದರೆ, ಮತ್ತೊಂದು ಕಡೆ ತೈಲದರ ಏರಿಕೆಯಿಂದ ಬಿಎಂಟಿಸಿ ಇನ್ನಷ್ಟು ನಷ್ಟದ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ, ‌ಇದೀಗ ಮತ್ತೊಮ್ಮೆ ದರ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

THOUGHT FOR BMTC TICKET PRICE HIKE
ನಷ್ಟದ ಸುಳಿಯಲ್ಲಿರುವ ಬಿಎಂಟಿಸಿಯಿಂದ ಮತ್ತೊಮ್ಮೆ ದರ ಪರಿಷ್ಕರಣೆ ಪ್ರಸ್ತಾವನೆ

By

Published : Mar 18, 2021, 6:40 AM IST

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಬಿಎಂಟಿಸಿ ಸಂಕಷ್ಟ ಅನುಭವಿಸಿದೆ. ಪ್ರಯಾಣಿಕರ ಸಂಖ್ಯೆ ಇಳಿಕೆ ಒಂದೆಡೆಯಾದರೆ, ಇನ್ನೊಂದು ಕಡೆ ತೈಲ ದರ ಏರಿಕೆಯಿಂದ ಇಕ್ಕಟ್ಟಿಗೆ ಸಿಲುಕಿರುವ ನಿಗಮ ಇದೀಗ ಮತ್ತೊಮ್ಮೆ ಟಿಕೆಟ್ ದರ ಏರಿಕೆಗೆ ಚಿಂತನೆ ನಡೆಸಿದೆ.

ನಷ್ಟದ ಸುಳಿಯಲ್ಲಿರುವ ಬಿಎಂಟಿಸಿಯಿಂದ ಮತ್ತೊಮ್ಮೆ ದರ ಪರಿಷ್ಕರಣೆ ಪ್ರಸ್ತಾವನೆ

ಹೀಗಾಗಿ, ಕೊಂಚಮಟ್ಟಿಗೆ ಪರಿಸ್ಥಿತಿ ನಿಭಾಯಿಸಲು ಹಾಗೂ ಆರ್ಥಿಕ ಚೇತರಿಕೆ ಕಾಣಲು ಸಂಸ್ಥೆಯು ಶೇ. 18 ರಿಂದ 20ರಷ್ಟು ದರ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿದೆ. ಕಳೆದ ವರ್ಷ ಕೆಎಸ್ಆರ್​ಟಿಸಿ, ಎನ್​​ಡಬ್ಲೂಕೆಎಸ್​ಆರ್​ಟಿಸಿ, ಎನ್​ಇಕೆಎಸ್ಆರ್​​ಟಿಸಿಯ ದರ ಪರಿಷ್ಕರಣೆ ಮಾಡಲಾಗಿತ್ತು. ಹೀಗಾಗಿ, ಬಿಎಂಟಿಸಿಯೂ ಪ್ರಯಾಣ ದರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ, ಪ್ರಯಾಣ ದರ ಹೆಚ್ಚಳ ಮಾಡಿದರೆ ಜನಸಾಮಾನ್ಯರಿಗೆ ಹೊರೆಯಾಗಲಿರುವ ಕಾರಣದಿಂದ ತಡೆ ಹಿಡಿಯಲಾಯ್ತು. ಇದೀಗ ಮತ್ತೊಮ್ಮೆ ದರ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜೊತೆಗೆ ವೇತನ ತಡವಾದರೆ ಸಿಬ್ಬಂದಿ ಮುಷ್ಕರ ಮಾಡುವ ಉದ್ದೇಶದಿಂದ ಇತ್ತ ಸಿಬ್ಬಂದಿ ಮನವೊಲಿಕೆ ಕಾರ್ಯಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಸಂಬಂಧ ಮಾತಾನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ,‌ ಕೋವಿಡ್ ಕಾರಣದಿಂದ ಎಷ್ಟರ ಮಟ್ಟಿಗೆ ನಷ್ಟವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಳೆದ ವರ್ಷ 35 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದರು. ಆದರೀಗ 20-21 ಲಕ್ಷಕ್ಕೆ ಇಳಿದಿದೆ. ಸಂಸ್ಥೆಗೆ ಬರುತ್ತಿರುವ ಖರ್ಚು, ತೈಲ ದರ ಎಲ್ಲವೂ ಹೆಚ್ಚಾಗುತ್ತಲೇ ಇದೆ. ಆರ್ಥಿಕ ಸಂಕಷ್ಟದಲ್ಲಿ ಸಂಸ್ಥೆ ನಡೆಸುವಂತಾಗಿದೆ. ಈಗಾಗಲೇ ಸರ್ಕಾರವೂ ಮಾರ್ಚ್​ವರೆಗಿನ ಸಿಬ್ಬಂದಿ ವೇತನ ನೀಡುವ ಜವಾಬ್ದಾರಿಯನ್ನ ಹೊತ್ತಿದೆ. ತಿಂಗಳ ವೇತನ ನಿಧಾನಗತಿ ಆಗಿದೆಯೇ ಹೊರತು ಎಂದಿಗೂ ವೇತನ ಕಡಿತವಾಗಿಲ್ಲ ಎಂದರು.

ಓದಿ:ಬೆಳಗ್ಗಿನ ಅಜಾನ್​​ಗೆ ಯಾವುದೇ ನಿಷೇಧ ಹೇರಿಲ್ಲ: ವಕ್ಫ್ ಬೋರ್ಡ್ ಸ್ಪಷ್ಟನೆ

ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನ ಸಂಸ್ಥೆಯ ಸಿಬ್ಬಂದಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಆಯಾ ಡಿಪೋಗಳಿಗೆ ತೆರಳಲಾಗುತ್ತಿದೆ ಅಂತ ಮಾಹಿತಿ ನೀಡಿದರು.

ABOUT THE AUTHOR

...view details