ಬೆಂಗಳೂರು: ಖೇಲ್ ರತ್ನ ಪ್ರಶಸ್ತಿ ಬಳಿಕ ಇದೀಗ ಅಸ್ಸೋಂನ ರಾಷ್ಟ್ರೀಯ ಉದ್ಯಾನವನದಿಂದಲೂ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರು ತೆರವುಗೊಳಿಸಲಾಗಿದ್ದು, ಇದೊಂದು ಮೂರ್ಖ ನಿರ್ಧಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಅಸ್ಸೋಂನ 'ರಾಜೀವ್ ಗಾಂಧಿ ಒರಾಂಗ್ ರಾಷ್ಟ್ರೀಯ ಉದ್ಯಾನವನ'ವನ್ನು 'ಒರಾಂಗ್ ರಾಷ್ಟ್ರೀಯ ಉದ್ಯಾನವನ' ಎಂದು ಹಿಮಂತ ಬಿಸ್ವಾ ಶರ್ಮಾ ಸರ್ಕಾರ ಮರುನಾಮಕರಣ ಮಾಡಿದೆ. ನಿನ್ನೆ ನಡೆದ ಅಸ್ಸೋಂ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡುವಂತೆ ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ದೀರ್ಘಕಾಲದ ಬೇಡಿಕೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಸ್ಸೋಂ ಸರ್ಕಾರ ಹೇಳಿಕೊಂಡಿದೆ.