ಕರ್ನಾಟಕ

karnataka

ETV Bharat / city

ಕತ್ತಿಯಿಂದ‌ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾದ ಕಿರಾತಕ : ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಕತ್ತಿಯಿಂದ‌ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿ

ದುಷ್ಕರ್ಮಿಯೊಬ್ಬ ಕತ್ತಿಯಿಂದ‌ ಹಲ್ಲೆ ಮಾಡಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌..

Thief escaped the bike in  Bengaluru
ಕತ್ತಿಯಿಂದ‌ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾದ ಕಿರಾತಕ: ಸಿಸಿಟಿವಿ ದೃಶ್ಯ

By

Published : May 25, 2022, 12:17 PM IST

ಬೆಂಗಳೂರು :ಸಹಾಯ ಮಾಡಲು ಬಂದ ಬೈಕ್ ಸವಾರನ ಮೇಲೆ ದುಷ್ಕರ್ಮಿಯೊಬ್ಬ ಕತ್ತಿಯಿಂದ‌ ಹಲ್ಲೆ ಮಾಡಿ ಬೈಕ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಜಧಾನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರಮಾವಿನ ವಿಜಯಾ ಬ್ಯಾಂಕ್ ಕಾಲೋನಿಯ ಬಳಿ‌ ಮೇ 18ರಂದು ಈ ಘಟನೆ ನಡೆದಿದೆ.

ಕತ್ತಿಯಿಂದ‌ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾದ ಕಿರಾತಕ : ಸಿಸಿಟಿವಿ ದೃಶ್ಯ

ಘಟನೆಯಲ್ಲಿ 'ಪೀಪಲ್ ಫಾರ್ ಅನಿಮಲ್ಸ್' ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ತರುಣ್ ಅಗರವಾಲ್ ಎಂಬುವರು ಹಲ್ಲೆಗೊಳಗಾಗಿದ್ದಾರೆ. ಕಳೆದ ಮೇ 18ರ ರಾತ್ರಿ ಹೊರಮಾವು ರಸ್ತೆಯಲ್ಲಿ ನಾಯಿಗಳಿಗೆ ಆಹಾರ ಹಾಕಲು ಬರುವಾಗ ಮಾರ್ಗ ಮಧ್ಯೆ ಬೈಕ್ ಅಡ್ಡಗಟ್ಟಿದ್ದ ದುಷ್ಕರ್ಮಿ ಬೈಕ್​​ನಲ್ಲಿ‌ ಪೆಟ್ರೋಲ್ ಖಾಲಿಯಾಗಿದೆ, ಸಹಾಯ ಮಾಡುವಂತೆ ಕೇಳಿಕೊಂಡಿದ್ದ.

ಇದಕ್ಕೆ ತರುಣ್ ಸಮ್ಮತಿ ಸೂಚಿಸಿದ್ದ. ಕ್ಷಣಾರ್ಧದಲ್ಲಿ ಬೈಕ್ ಸೀಟ್​​ನಲ್ಲಿದ್ದ ಕತ್ತಿ ತೆಗೆದು ಹಲ್ಲೆ ನಡೆಸಿದ್ದಾನೆ. ನೋಡ ನೋಡುತ್ತಿದ್ದಂತೆ ಬೈಕ್ ಸಮೇತ ಎಸ್ಕೇಪ್ ಆಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಬೈಕ್ ಡಿಕ್ಕಿಯಲ್ಲಿದ್ದ ಎರಡು ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಸಮೇತ ಕಳ್ಳ ಪರಾರಿಯಾಗಿದ್ದಾನೆ ಎಂದು ತರುಣ್ ದೂರಿನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details