ಬೆಂಗಳೂರು: ಕೊರೊನಾ, ಕಾಲರಾ ಭೀತಿ ಹಿನ್ನಲೆ ನಗರದ ಶಿವಾಜಿನಗರ ವಲಯದಲ್ಲಿ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವುದನ್ನು ರದ್ದುಪಡಿಸಲಾಗಿದ್ದು, ಕಾರ್ಯಕ್ರಮ ನಡೆಸಿದರೆ ಹೋಟೆಲ್ ಕಲ್ಯಾಣ ಮಂಟಪಗಳ ಲೈಸೆನ್ಸ್ ರದ್ದು ಮಾಡುವುದಾಗಿ ವಲಯ ಆರೋಗ್ಯ ವೈದ್ಯಾಧಿಕಾರಿ ನೋಟಿಸ್ ಹೊರಡಿಸಿದ್ದಾರೆ.
ಶಿವಾಜಿನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ ಇಲ್ಲ, ಪಾಲಿಕೆ ಆರೋಗ್ಯಾಧಿಕಾರಿಯಿಂದ ಎಡವಟ್ಟು - ಶಿವಾಜಿನಗರ ವಲಯದಲ್ಲಿ ಹೊರಾಂಗಣ ಕಾರ್ಯಕ್ರಮ
ಕೊರೊನಾ, ಕಾಲರಾ ಭೀತಿ ಹಿನ್ನೆಲೆ ಶಿವಾಜಿನಗರ ವಲಯದಲ್ಲಿ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವುದನ್ನು ರದ್ದುಪಡಿಸಲಾಗಿದ್ದು, ಕಾರ್ಯಕ್ರಮ ನಡೆಸಿದರೆ ಹೋಟೆಲ್ ಕಲ್ಯಾಣ ಮಂಟಪಗಳ ಲೈಸೆನ್ಸ್ ರದ್ದು ಮಾಡುವುದಾಗಿ ವಲಯ ಆರೋಗ್ಯ ವೈದ್ಯಾಧಿಕಾರಿ ನೋಟಿಸ್ ಹೊರಡಿಸಿದ್ದಾರೆ.
ಶಿವಾಜಿನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ ಇಲ್ಲ, ಪಾಲಿಕೆ ಆರೋಗ್ಯಾಧಿಕಾರಿಯಿಂದ ಎಡವಟ್ಟು..!
ಆದ್ರೆ, ಬಿಬಿಎಂಪಿಯು ಈ ವೈದ್ಯಾಧಿಕಾರಿಗೆ ಇಂತಹ ಸೂಚನೆ ಹಾಗೂ ತಿಳುವಳಿಕೆ ನೀಡಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ ವೈದ್ಯಾಧಿಕಾರಿ (ಶಿವಾಜಿನಗರ) ಮೇಲ್ಕಂಡ ಪತ್ರವನ್ನು ಹಿಂಪಡೆದಿರುವುವಾಗಿ ಸ್ಪಷ್ಟೀಕರಿಸಿದ್ದಾರೆ. ಸಾರ್ವಜನಿಕರಲ್ಲಿ ಈ ಎಲ್ಲಾ ಗೊಂದಲಗಳು ಉಂಟಾಗಿರುವುದಕ್ಕೆ ವಿಶೇಷ ಆಯುಕ್ತರು (ಆರೋಗ್ಯ) ವಿಷಾದ ವ್ಯಕ್ತಪಡಿಸಿದ್ದಾರೆ.