ಕರ್ನಾಟಕ

karnataka

ETV Bharat / city

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.. ಹಾಜರಾತಿ ಇಲ್ಲದಿದ್ದರೂ SSLC, ದ್ವಿತೀಯ PUC ಪರೀಕ್ಷೆಗೆ ಅವಕಾಶ - ಎಸ್ಎಸ್ಎಲ್​ಸಿ ಪರೀಕ್ಷೆ

2022-23ನೇ ಸಾಲಿನ ಎಸ್ಎಸ್ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದೆ. ಕೊರೊನಾ ಕಾರಣಕ್ಕೆ ಹಾಜರಾತಿಯಿಂದ ವಿನಾಯಿತಿ ಸಿಕ್ಕಿದೆ.

Ramachandran
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ರಾಮಚಂದ್ರನ್

By

Published : Mar 12, 2022, 6:59 PM IST

ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ ಅಂತ್ಯದಿಂದ ಎಸ್ಎಸ್ಎಲ್​ಸಿ ಪರೀಕ್ಷೆ ಹಾಗೂ ಏಪ್ರಿಲ್​ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಹಾಜರಾತಿ ಇಲ್ಲದೇ ಇದ್ದರೂ ಈ‌ ಬಾರಿ ಪರೀಕ್ಷೆಗೆ ಅವಕಾಶ ಕೊಡುವ ಮಹತ್ವದ ನಿರ್ಧಾರವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ತೆಗೆದುಕೊಂಡಿದೆ.

ಪ್ರತಿ ವರ್ಷ ಹಾಜರಾತಿ ಕೊರತೆಯಿಂದ ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಗುತ್ತಿರಲಿಲ್ಲ. ಶಿಕ್ಷಣ ಕಾಯ್ದೆ 2006ರ ಅಧಿನಿಯಮ ಪ್ರಕಾರ ಹಾಜರಾತಿ ಕಡ್ಡಾಯಗೊಳಿಸಲಾಗಿತ್ತು. ಆದ್ರೆ ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಕಡ್ಡಾಯ ಹಾಜರಾತಿ ಕೈಬಿಡಲಾಗಿತ್ತು. ಈ ವರ್ಷವೂ ಕೋವಿಡ್​ ಕಾರಣ ಹಾಜರಾತಿ ನಿಯಮ ಕೈಬಿಡಲಾಗಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ರಾಮಚಂದ್ರನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಟೆಸ್ಟ್​ ಪಂದ್ಯ ವೀಕ್ಷಣೆಗೆ ತೆರಳಿದ ಕಿಚ್ಚ ಸುದೀಪ್​​.. ಅಪ್ಪು ಫೋಟೋ ಜೊತೆ ಬಾದ್​ಶಾ​ ಪೋಸ್

ಈ ಹಿಂದೆ ಶೇ.75 ರಷ್ಟು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಅವಕಾಶ ಇರಲಿಲ್ಲ. ಈ ಬಾರಿ ಹಾಜರಾತಿ ಕಡ್ಡಾಯ ನಿಯಮ ಇಲ್ಲದೇ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಜರಾತಿ ಕೊರತೆ ಇದ್ದರೂ ಪರೀಕ್ಷೆ ಬರೆಯಬೇಕು ಅಂದ್ರೆ ಕೆಲವು ಕಂಡಿಷನ್ಸ್ ಅನ್ವಯಿಸಲಿವೆ. ಕಡ್ಡಾಯವಾಗಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿ ಮಾಡಿರಬೇಕು ಎಂದು ತಿಳಿಸಿದರು.

ABOUT THE AUTHOR

...view details