ಕರ್ನಾಟಕ

karnataka

ETV Bharat / city

ಸಿಗರೇಟ್ ಶೋಕಿಗಾಗಿ.. ಮಾಜಿ ಸಿಎಂ ಮನೆ ಸಮೀಪದಲ್ಲೇ ಕಳ್ಳರ ಕೈಚಳಕ

ಆರ್‌ಎಂವಿ 2ನೇ ಹಂತದ ಸ್ಟಾರ್ ಬಾಕ್ಸ್ ಶಾಪ್​ಗೆ ಬಂದಿದ್ದ ಆರೋಪಿಗಳು ಬಾಗಿಲನ್ನು ತೆರೆದಿದ್ದರಾದರೂ ಲಾಕರ್ ಓಪನ್ ಮಾಡಲಾಗದೇ ಪರದಾಡಿದ್ದಾರೆ. ಮಧ್ಯರಾತ್ರಿ ಕಳ್ಳರ ಪರದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವು ನಿಮಿಷಗಳ ಕಾಲ ತಡಕಾಡಿ ಕೊನೆಗೆ ಚಿಲ್ಲರೆ ಇದ್ದ ಬಾಕ್ಸ್ ಹಾಗೂ ಚಾಕೊಲೇಟ್ ಕದ್ದಿದ್ದಾರೆ..

theft-to-smoke-cigarette
ಮಾಜಿ ಸಿ.ಎಂ ಮನೆ ಸಮೀಪದಲ್ಲೇ ಕಳ್ಳರ ಕೈಚಳಕ

By

Published : Apr 5, 2022, 5:35 PM IST

Updated : Apr 5, 2022, 7:35 PM IST

ಬೆಂಗಳೂರು :ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆ ಸಮೀಪದಲ್ಲೇ ಕಳ್ಳರು ಕೈಚಳಕ ತೋರಲು ಯತ್ನಿಸಿ ಲಾಕರ್ ತೆರೆಯಲು ಪರದಾಡಿದ ಘಟನೆ ಮಾ.23ರಂದು ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೋಹಿತ್ ಗಿರಿ (21) ಎಂಬ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಇಂದಿರಾನಗರದಿಂದ ಕದ್ದ ಬೈಕಿನಲ್ಲಿ ಬಂದ ಆರೋಪಿಗಳು ಸಿಗರೇಟ್ ಶೋಕಿಗೆ ಹಣ ಹೊಂದಿಸಲು ದೊಡ್ಡ ದೊಡ್ಡ ಅಂಗಡಿಗಳಲ್ಲಿ ಲೂಟಿ ಮಾಡಲು ಯತ್ನಿಸಿದ್ದಾರೆ. ಮಾರ್ಚ್ 22ರ ಒಂದೇ ರಾತ್ರಿ ಸರಣಿಗಳ್ಳತನಕ್ಕೆ ಯತ್ನಿಸಿದ್ದಾರೆ. ಸಂಜಯ್ ನಗರದಲ್ಲಿ ಸತತ ಮೂರು ಅಂಗಡಿಗಳಲ್ಲಿ ದೋಚುವ ಯತ್ನ ಮಾಡಿದ ಖದೀಮರಿಗೆ ಕೇವಲ ಪುಡಿಕಾಸು, ಕೆಲ ವಸ್ತುಗಳನ್ನಷ್ಟೆ ಕದಿಯಲು ಸಾಧ್ಯವಾಗಿದೆ.

CCTVಯಲ್ಲಿ ಸೆರೆ

ಬಳಿಕ ಆರ್‌ಎಂವಿ 2ನೇ ಹಂತದ ಸ್ಟಾರ್ ಬಾಕ್ಸ್ ಶಾಪ್​ಗೆ ಬಂದಿದ್ದ ಆರೋಪಿಗಳು ಬಾಗಿಲನ್ನು ತೆರೆದಿದ್ದರಾದರೂ ಲಾಕರ್ ಓಪನ್ ಮಾಡಲಾಗದೇ ಪರದಾಡಿದ್ದಾರೆ. ಮಧ್ಯರಾತ್ರಿ ಕಳ್ಳರ ಪರದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವು ನಿಮಿಷಗಳ ಕಾಲ ತಡಕಾಡಿ ಕೊನೆಗೆ ಚಿಲ್ಲರೆ ಇದ್ದ ಬಾಕ್ಸ್ ಹಾಗೂ ಚಾಕೊಲೇಟ್ ಕದ್ದಿದ್ದಾರೆ.

ಬಳಿಕ ಚಾಕೊಲೇಟ್ ತಿನ್ನುತ್ತಲೇ ಧನಸಹಾಯದ ಚಿಕ್ಕ ಬಾಕ್ಸ್ ಕದ್ದು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮರುದಿನ ಅಂಗಡಿ ಮಾಲೀಕ ನೀಡಿದ ದೂರಿನನ್ವಯ ರೋಹಿತ್ ಗಿರಿ ಎಂಬ ಓರ್ವನನ್ನ ಬಂಧಿಸಲಾಗಿದೆ. ಬಂಧಿತ ಆರೋಪಿ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಎನ್ನಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ವಿವಿಧ ಜಿಲ್ಲೆಗಳಿಂದ ಕದ್ದ ಒಟ್ಟು 33 ಬೈಕ್‌ಗಳ ವಶ: ಖತರ್ನಾಕ್ ಕಳ್ಳನ ಸೆರೆ

Last Updated : Apr 5, 2022, 7:35 PM IST

ABOUT THE AUTHOR

...view details