ಬೆಂಗಳೂರು:ಎಲ್ಲೆಡೆ ಆರ್ಭಟವಿಟ್ಟ ಮಾರಕ ರೋಗ ತಡೆಗೆ ಜನತಾ ಕರ್ಫ್ಯೂ ನಂತರ ಸೆಮಿ ಲಾಕ್ಡೌನ್ ಜಾರಿಯಾಯ್ತು. ಇದೀಗ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆಯೂ ಆರಂಭವಾಗಿದೆ. ಕೋವಿಡ್, ಲಾಕ್ಡೌನ್, ಪೊಲೀಸರ ಕಾರ್ಯಾಚರಣೆ ಖದೀಮರ ಕೈ ಚಳಕಕ್ಕೆ ಅಡ್ಡಿಯಾಗಿದೆ. ಹೌದು, ಕಳೆದ ಎರಡು ಮೂರು ತಿಂಗಳಿನಲ್ಲಿ ಕಳ್ಳತನದಂತಹ ಪ್ರಕರಣಗಳು ತೀರಾನೇ ಇಳಿಕೆ ಕಂಡಿದೆ.
ಕಳೆದ ಕೆಲ ದಿನಗಳಿಂದೆ ರಾಜ್ಯ ರಾಜಧಾನಿಯಲ್ಲಿ ಸೋಂಕು ವಿಪರೀತವಾಗಿತ್ತು. ಕೋವಿಡ್ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜನರು ಸುಖಾಸುಮ್ಮನೆ ಹೊರಗೆ ಬಾರಲು ಹಿಂದೇಟು ಹಾಕುತ್ತಿದ್ದರು. ಇದೆಲ್ಲವೂ ಕಳ್ಳರ ಕೈ ಕಟ್ಟಿ ಹಾಕಿದ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳು ತೀರಾ ಇಳಿಕೆಯಾಗಿದ್ದವು. ಆದ್ರೆ ಸೈಬರ್ ಕ್ರೈಂ ಮಾತ್ರ ಎಗ್ಗಿಲ್ಲದೇ ನಡೆಯುತ್ತಿದೆ.