ಕರ್ನಾಟಕ

karnataka

ETV Bharat / city

ಮನೆ ಲಾಕ್ ಮಾಡಿ ಹೋದವರ ಮನೆಯಲ್ಲಿ ಕಳ್ಳರ ಕೈಚಳಕ: 20 ಗ್ರಾಂ ಚಿನ್ನ,50 ಗ್ರಾಂ ಬೆಳ್ಳಿ ಕಳ್ಳತನ - banglore house theft

ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಅಮಿತ್ ಬಹೇಟಿ ಎಂಬುವವರು ಮನೆ ಲಾಕ್ ಮಾಡಿ ಮಡಿಕೇರಿಗೆ ಹೋದ ಸಂದರ್ಭದಲ್ಲಿ ಅವರ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಬಂದಿದೆ. ಈ‌ ಹಿನ್ನೆಲೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

banglore
ಮನೆಯಲ್ಲಿ ಕಳ್ಳತನ

By

Published : Oct 12, 2020, 6:08 PM IST

ಬೆಂಗಳೂರು: ಮನೆ ಬಿಟ್ಟು ಹೊರಗಡೆ ಹೋಗುವವರು ಹುಷಾರಾಗಿರಬೇಕಾದದ್ದು ಅವಶ್ಯಕ. ಯಾಕಂದ್ರೆ ನಿಮ್ಮ ಮನೆ ಎಷ್ಟೇ ಲಾಕ್ ಇದ್ರೂ ದರೋಡೆ ಮಾಡುವ ತಂಡ ಖತಾರ್ನಾಕ್ ಆಗಿ ಗ್ರಿಲ್‌ ಡೋರ್, ರೂಮ್ ಡೋರ್ ಹಾಗೂ ಗೋದ್ರೇಜ್ ಲಾಕರ್​ಗಳನ್ನು ಒಡೆದು ಕಳ್ಳತನ ಮಾಡುತ್ತಾರೆ.

ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಅಮಿತ್ ಬಹೇಟಿ ಎಂಬುವವರು‌ ಅಕ್ಟೋಬರ್ 4 ರಂದು ಮನೆ ಲಾಕ್ ಮಾಡಿ ಮಡಿಕೇರಿಗೆ ಹೋಗಿದ್ದರು. ಹಾಗೆ ಈ ಸಂಧರ್ಭ ಮನೆಯಲ್ಲಿರುವ ನಾಯಿಗೆ ಊಟ ಹಾಕಲು ತಮ್ಮ ನೆರೆಹೊರೆಯವರಾದ ಸ್ಮಿತಾ ಹಾಗೂ ಕವಿತಾ ಎಂಬುವವರಿಗೆ ಹೇಳಿದ್ದರು. ಹೀಗೇ 8ನೇ‌ ತಾರೀಕಿನಂದೂ ಅಮಿತ್ ಮನೆಗೆ ಹೋಗಿ ನೆರೆಮನೆಯವರು ಬಂದಿದ್ದರು. ನಂತರ 10ನೇ ತಾರೀಕು ಅಮಿತ್ ಬಹೇಟಿ ಮನೆಗೆ ತೆರಳಿದ್ದಾಗ ಮನೆ ಗೇಟಿನ ಬೀಗ ಒಡೆದ ಸ್ಥಿತಿಯಲ್ಲಿ ಮತ್ತು ಮನೆ ಬಾಗಿಲು ಒಡೆದ ರೀತಿಯಲ್ಲಿತ್ತು.

ಇನ್ನು ತಕ್ಷಣ ಅಮಿತ್​​ ಬಹೇಟಿಗೆ ವಿಚಾರ ತಿಳಿಸಿದ್ದು, ಬಂದು ಪರಿಶೀಲಿಸಿದಾಗ ಮನೆಯಲ್ಲಿದ್ದ ಸುಮಾರು 2ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನ ಮತ್ತು 50 ಗ್ರಾಂ ಬೆಳ್ಳಿ ಕಳ್ಳತನವಾಗಿರುವ ವಿಚಾರ ಬಯಲಾಗಿದೆ‌.

ಈ‌ ಹಿನ್ನೆಲೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾಣಸವಾಡಿ ಪೊಲೀಸರು‌ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details