ದೊಡ್ಡಬಳ್ಳಾಪುರ:ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ₹1.50 ಲಕ್ಷ ಮೌಲ್ಯದ 380 ಶರ್ಟ್, 90 ಪ್ಯಾಂಟ್ಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ: ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ 380 ಶರ್ಟ್, 90 ಪ್ಯಾಂಟ್ ಕದ್ದಿದ್ದ ಆರೋಪಿಗಳ ಬಂಧನ - ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕಳ್ಳತನ
ದೊಡ್ಡಬಳ್ಳಾಪುರ ಅಪೆರಲ್ ಪಾರ್ಕ್ನಲ್ಲಿನ ಬಾಂಬೆ ರೆಯಾನ್ ಫ್ಯಾಕ್ಟರಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಬಟ್ಟೆ ಕಳ್ಳತನವಾಗಿತ್ತು.
ದೊಡ್ಡಬಳ್ಳಾಪುರ ಅಪೆರಲ್ ಪಾರ್ಕ್ನಲ್ಲಿನ ಬಾಂಬೆ ರೆಯಾನ್ ಫ್ಯಾಕ್ಟರಿಯಲ್ಲಿ ಕಳೆದೊಂದು ತಿಂಗಳ ಹಿಂದೆ ಬಟ್ಟೆ ಕಳ್ಳತನವಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅನಿಲ್ ಹಾಗೂ ಮಹೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಾವು ಬಟ್ಟೆ ಕದ್ದಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳಿಬ್ಬರೂ ಈ ಹಿಂದೆ ಬಾಂಬೆ ರೆಯಾನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಬಿಟ್ಟಿದ್ದರು. ಬಳಿಕ ಕಳ್ಳತನ ಆರಂಭಿಸಿದ್ದರು. ಕಳವು ಮಾಡಿದ ಬಟ್ಟೆಗಳನ್ನು ಸ್ನೇಹಿತರ ಮೂಲಕ ಮಾರಾಟ ಮಾಡಿಸಿ ಹಣ ಗಳಿಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.