ಕರ್ನಾಟಕ

karnataka

ETV Bharat / city

3 ಸಾವಿರ ಮಹಿಳೆಯರಿಗೆ ಬಾಗಿನ ನೀಡಿದ ಯುವ ಮುಖಂಡ ಲೋಕೇಶ್ ‌ಗೌಡ - Byrathi Basavaraj

ಸುಮಾರು ಮೂರು ಸಾವಿರ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಈ ವರ್ಷದ ದೀಪಾವಳಿಯನ್ನು ವಿಜ್ಞಾನ ‌ನಗರದ ಯುವ ಮುಖಂಡ ಲೋಕೇಶ್ ಗೌಡ ಆಚರಣೆ ಮಾಡಿದ್ದಾರೆ.

ಲೋಕೇಶ್ ‌ಗೌಡ
ಲೋಕೇಶ್ ‌ಗೌಡ

By

Published : Nov 5, 2021, 7:33 AM IST

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ವಿಜ್ಞಾನ ‌ನಗರದ ಯುವ ಮುಖಂಡ ಲೋಕೇಶ್ ಗೌಡ ತಮ್ಮ ವಾರ್ಡ್​ನ ಸುಮಾರು 3 ಸಾವಿರ ಬಡ‌ ಮತ್ತು ಕೂಲಿ ಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿದರು.

ಕಾರ್ಯಕ್ರಮಕ್ಕೆ ಸಚಿವ ಭೈರತಿ ಬಸವರಾಜ್ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಈ ವಾರ್ಡ್​ನಲ್ಲಿ ಕಳೆದ ಒಂದೆರಡು ವರ್ಷಗಳಿಂದ ಲೋಕೇಶ್ ಮತ್ತು ಅವರ ಕುಟುಂಬದವರು ಸಾಕಷ್ಟು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಮೂರು ತಿಂಗಳು ಬಡವರಿಗೆ ದಿನಸಿ ಕಿಟ್​ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಿಂದ ಲೋಕೇಶ್ ಈ‌ ಸಮಾಜ ಸೇವೆಯನ್ನು ಮಾಡುತ್ತಿಲ್ಲ, ಬಡವರಿಗೆ ಒಳ್ಳೆಯದಾಗಲಿ ಎಂದು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದೀಗ ಸಾವಿರಾರು ಮಹಿಳೆಯರಿಗೆ ಬಾಗಿನ ನೀಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಇದೇ ರೀತಿ ಜನ ಸೇವೆ ಮಾಡುವವರು ಮುಂದೆ ಬರಬೇಕು ಎಂದರು.

ಮಹಿಳೆಯರಿಗೆ ಬಾಗಿನ ನೀಡಿದ ಯುವ ಮುಖಂಡ ಲೋಕೇಶ್ ‌ಗೌಡ

ನಂತರ ಮಾತನಾಡಿದ ಲೊಕೇಶ್ ಗೌಡ, ನಾನು ಮತ್ತು ನಮ್ಮ ಕುಟುಂಬದವರು ಕಳೆದ ಎರಡು ವರ್ಷಗಳಿಂದ ಕಡು ಬಡವರಿಗೆ ಸಹಾಯ ಮಾಡುತ್ತಾ ಬರುತ್ತಿದ್ದೇವೆ. ಬಡವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಸುಮಾರು ಮೂರು ಸಾವಿರ ಮಹಿಳೆಯರಿಗೆ ಸೀರೆಯನ್ನು ನೀಡುವ ಮೂಲಕ ಈ ವರ್ಷದ ದೀಪಾವಳಿ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details