ಕರ್ನಾಟಕ

karnataka

ETV Bharat / city

ಕೊರೊನಾ ಶೂಟೌಟ್ ಮಾಡಲು ಕೈಜೊಡಿಸಿ; ಜನರಿಗಾಗಿ ದುಡಿಯುವ ಐಪಿಎಸ್​​ಗಳು ಇವರು

ಹೀಗಾಗಿ‌ ಕಿರಿಯ ಸಿಬ್ಬಂದಿ ಕಷ್ಟ ಆಲಿಸಿದ ಹಿರಿಯ ಐಪಿಎಸ್ ಅಧಿಕಾರಿಗಳು, ಕೊರೊನಾವನ್ನ ಹೊಡೆದೊಡಿಸಲು ಬಿಸಲಿನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಆರೋಗ್ಯದ ಮೇಲೆ ಎಚ್ಚರ ವಹಿಸಿ. ಅವರೊಂದಿಗೆ ನಾವಿದ್ದೇವೆ ಎಂದಿದ್ದಾರೆ. ಮಹಾಮಾರಿ ಕೊರೊನಾವನ್ನ ಶೂಟೌಟ್ ಮಾಡಲು‌‌ ಕೈ ಜೋಡಿಸಿ. ಎಲ್ಲರ ಸಹಾಕಾರ ಇದ್ದರೆ ಕೊರೊನಾವನ್ನ ಆರೆಸ್ಟ್ ಮಾಡಬಹುದು ಎಂದು ಕೆಲವರು ತಮ್ಮ ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

By

Published : Apr 1, 2020, 7:43 PM IST

The tight security of the police
ಜನರಿಗಾಗಿ ದುಡಿಯುವ ಐಪಿಎಸ್​

ಬೆಂಗಳೂರು: ದಿನೇ ದಿನೆ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಕಾರಣ ಜನರಲ್ಲಿ ಆತಂಕ‌ ಮೂಡುತ್ತಿದ್ದರೆ, ಮತ್ತೊಂದೆಡೆ‌‌ ತಮ್ಮ ಜೀವದ ಹಂಗನ್ನ ತೊರೆದು ಪೊಲೀಸರು ಲಾಕ್​ಡೌನ್​ ಯಶಸ್ವಿಗೊಳಿಸಿ ಕೊರೊನಾವನ್ನ ಹೊಡೆದೊಡಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಲಿಕಾನ್ ಸಿಟಿಯ ಪ್ರತಿ ಠಾಣಾ ವ್ಯಾಪ್ತಿಯ ಇನ್​​​ಸ್ಪೆಕ್ಟರ್​​​, ಸಬ್ ಇನ್​​​​ಸ್ಪೆಕ್ಟರ್, ಸಿಬ್ಬಂದಿ ಉರಿ ಬಿಸಿಲಿನಲ್ಲೂ ಕಾರ್ಯನಿರ್ಹವಹಿಸಿ ಜನ ಮನೆಯಿಂದ ಹೊರಬಾರದಂತೆ ನೋಡಿಕೊಳ್ಳುತ್ತಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿಗಳು ಕೂಡ ತಮ್ಮದೇಯಾದ ರೀತಿಯಲ್ಲಿ ಕೊರೊನಾವನ್ನು ಹೊಡೆದೊಡಿಸಲು ಸಜ್ಜಾಗಿದ್ದಾರೆ. ಅವರ್ಯಾರು ಅಂತ ನೀವೇ ನೋಡಿ...

1. ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್​ ಕಮಿಷನರ್​​

ರಾಜಧಾನಿಯ ಸಂಪೂರ್ಣ ಜವಾಬ್ದಾರಿ ಇವರ ಕೈಯಲ್ಲಿದೆ. ತನ್ನ ವ್ಯಾಪ್ತಿಯ ಡಿಸಿಪಿಗಳಾದ ಶಶಿಕುಮಾರ್ (ಉತ್ತರ ವಿಭಾಗ), ರಮೇಶ್ ಬಾನೋತ್ (ಪಶ್ಚಿಮ ವಿಭಾಗ), ರೋಹಿಣಿ ಕಟೋಚ್ (ದಕ್ಷಿಣಾ ವಿಭಾಗ), ಶರಣಪ್ಪ (ಪೂರ್ವ ವಿಭಾಗ), ಚೇತನ್ ಸಿಂಗ್ ರಾಥೋರ್ (ಕೇಂದ್ರ ವಿಭಾಗ), ಜೋಶಿ ಶ್ರೀನಾಥ್ (ಆಗ್ನೇಯ ವಿಭಾಗ), ಡಾ.ಭೀಮಾಶಂಕರ್ ಗುಳೇದ್ (ಈಶಾನ್ಯ ವಿಭಾಗ) ಅವರೊಂದಿಗೆ ಕೊರೊನಾ ಸೋಂಕು ಹರಡದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸುತ್ತಾರೆ. ಯಾವ ರೀತಿ ನಿಯಂತ್ರಣಕ್ಕೆ ತರಬೇಕು. ಜನರಿಗೆ ಆಹಾರ ಹಾಗೂ ಅಗತ್ಯ ಓಡಾಟಕ್ಕೆ ಸಮಸ್ಯೆಯಾಗದ ರೀತಿ ನೋಡಿಕೊಳ್ಳಬೇಕು ಎಂದು ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡುತ್ತಾರೆ.

2. ಇಶಾ ಪಂತ್​​, ಐಪಿಎಸ್ ಅಧಿಕಾರಿ (ಕಮಾಂಡ್ ಸೆಂಟರ್​ನಲ್ಲಿ ಡಿಸಿಪಿ)

ಇಶಾ ಪಂತ್​​​ ಅವರು ಕಮಿಷನರ್ ಕಚೇರಿಯ ಕಮಾಂಡ್ ಸೆಂಟರ್​​​​​ನಲ್ಲಿ ಮಹಿಳಾ ಡಿಸಿಪಿಯಾಗಿ ಕಾರ್ಯ ನಿರ್ವಸುತ್ತಿದ್ದಾರೆ. ಕೊರೊನಾ ತಡೆಗಟ್ಟಲು ಆರೊಗ್ಯ ಇಲಾಖೆ ಜೊತೆ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರದಲ್ಲಿ ಕೊರೊನಾ ಶಂಕೆ‌ ವ್ಯಕ್ತಿಗಳ ಮತ್ತು ಹೋಮ್​​​ ಕ್ವಾರಂಟೈನ್ ಇರುವವರ ಮೇಲೆ ನಿಗಾ ವಹಿಸುತ್ತಾರೆ. ಹಾಗೆ ಕಮಾಂಡ್ ಸೆಂಟರ್​​​​​ನಲ್ಲಿರುವ ಸಹಾಯವಾಣಿಗೆ (100) ಬರುವ ತುರ್ತು ಕರೆಗಳನ್ನ ಆಲಿಸಿ, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಾರೆ. ಕೊರೊನಾ ಕುರಿತು ಜನರಲ್ಲಿ‌ ಜಾಗೃತಿ ಮೂಡಿಸುತ್ತಿದ್ದಾರೆ.

3. ರವಿಕಾಂತೇಗೌಡ, ಬೆಂಗಳೂರು ನಗರ ಸಂಚಾರ ಪೊಲೀಸ್‌ ಜಂಟಿ ಆಯುಕ್ತ

ರವಿಕಾಂತೇಗೌಡ ಅವರು ತಮ್ಮ ಸಿಬ್ಬಂದಿ ಮುಖಾಂತರ ಕೊರೊನಾ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಬೀದಿ ನಾಟಕ, ರಸ್ತೆ ಬದಿಗಳಲ್ಲಿ ಜಾಗೃತಿ ಮೂಡಿಸುವ ಮಾಡುತ್ತಿದ್ದಾರೆ. ಹಾಗೆ‌, 'ಕೆಮ್ಮು ಬೇಡ, ಸೀನಬೇಡ, ಗುಂಪು ಗೂಡಬೇಡ, ಮುಸುಕು ಧರಿಸಬೇಡ, ಕಣ್ಣು ಮೂಗು ಮುಟ್ಟುತ್ತಲಿರಬೇಡ , ತೊಳೆಯುವುದು ಬಿಡಬೇಡ, ಇದೇ ಕೊರೊನಾ ಅಂತರಂಗ ಶುದ್ದಿ ಇದೇ ಕೊರೋನಾ ಬಹಿರಂಗ ಸುದ್ದಿ, ಇದೇ ಕೊರೊನಾ ಓಡಿಸುವ ಪರಿ' ಎಂಬ ಬರವಣಿಗೆಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ.

4. ಹೇಮಂತ್ ನಿಂಬಾಳ್ಕಾರ್, ಐಪಿಎಸ್​ ಅಧಿಕಾರಿ

ಪೊಲೀಸ್ ಇಲಾಖೆಯ ಸಿಬ್ಬಂದಿ ಹಿತದೃಷ್ಟಿಯನ್ನು ನೋಡಿಕೊಂಡು ಶೂಟ್ ಕೊರೊನಾ ಅನ್ನೋ ಟ್ಯಾಗ್​​ನಡಿ ಜನರಿಗೋಸ್ಕರ ಅಭಿಯಾನ ನಡೆಸುತ್ತಿದ್ದಾರೆ.

5. ಸಂದೀಪ್ ಪಾಟೀಲ್, ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ

ಸಿಲಿಕಾನ್ ಸಿಟಿಯ ಸಂಪೂರ್ಣ ‌ಜವಾಬ್ದಾರಿ ತೆಗೆದುಕೊಂಡಿರುವ ಇವರು, ನಕಲಿ ಸ್ಯಾನಿಟೈಸರ್, ಮಾಸ್ಕ್​​ಗಳ ಮಾರಾಟ ಮಾಡುವವರ ಹೆಡೆ ಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಹಿತದೃಷ್ಟಿಯಿಂದ ನಕಲಿ ಹಾವಳಿಗೆ ಕಡಿವಾಣ ಹಾಕುತ್ತಿದ್ದಾರೆ.

6. ನಿಶಾ ಜೇಮ್ಸ್, ಅಡ್ಮಿನ್ ವಿಭಾಗದ ಡಿಸಿಪಿ

ನಗರದ ಐಟಿ ವಿಭಾಗದಿಂದ ಜನರಿಗೆ ತೊಂದರೆಯಾಗದ ರೀತಿ ನಿಶಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿರುವ ಸ್ಥಳಕ್ಕೆ ತೆರಳಿ ಕೊರೊನಾ ತಡೆಯಲು ಏನು ಮಾಡಬೇಕು ಎಂಬುದರ ಕುರಿತು ಜಾಗೃತಿ‌ ಮೂಡಿಸುತ್ತಿದ್ದಾರೆ.

7. ದಿವ್ಯ ಸಾರಾ ಥಾಮಸ್, ಸಿಎಆರ್ ಡಿಸಿಪಿ

ಜನರಿಗೆ ಹಾಗೂ ಸಿಬ್ಬಂದಿಗೆ ಆಹಾರ ಸಮಸ್ಯೆ ಉಂಟಾದರೆ ಪೂರೈಸುವ ಕಾರ್ಯದಲ್ಲಿ ತೊಡಗಿದ್ದಾರೆ.

8. ಕುಲ್ ದೀಪ್ ಜೈನ್ & ರವಿ ಕುಮಾರ್ (ಡಿಸಿಪಿಗಳು)

ನಗರದಲ್ಲಿ ನಡೆಯುವ ಅಹಿತಕರ ಘಟನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದ್ದಾರೆ.

ABOUT THE AUTHOR

...view details