ಬೆಂಗಳೂರು: ಗೋಣಿ ಚೀಲ ಒಣಗಿಸುವ ವಿಚಾರಕ್ಕೆ ಕಿರಿಕ್ ತೆಗೆದು ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರದ ವಸಂತಪುರದಲ್ಲಿ ನಡೆದಿದೆ.
ಅಮುದಾ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ನೆರೆಮನೆಯ ವಿಜಯಲಕ್ಷ್ಮೀ, ಕುಮಾರ್, ವಿಶಾಲ್ ವಿರುದ್ಧ ದೂರು ನೀಡಲಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮುದಾ ಆರೋಪಿಸಿದ್ದಾರೆ.
ಮನೆಗೆಲಸ ಮಾಡುವ ಆಮುದಾ ವಸಂತಪುರದಲ್ಲಿ ವಾಸವಾಗಿದ್ದಾರೆ. ಜನವರಿ 11ರಂದು ನೆರೆಮನೆಯವರು ಅಮುದಾ ಮನೆಯ ಮುಂದಿನ ತುಳಸಿ ಮಂಟಪದ ಮೇಲೆ ಗೋಣಿ ಚೀಲ ಹಾಕಿದ್ದರಂತೆ. ಇದನ್ನು ಕಂಡ ಅವರು, ಗೋಣಿ ಚೀಲವನ್ನು ತೆಗೆಯಿರಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ನೆರೆಮನೆಯವರು ಗಲಾಟೆ ಮಾಡಿದ್ದಾರೆ.