ಕರ್ನಾಟಕ

karnataka

ETV Bharat / city

ದೂರು ತೆಗೆದುಕೊಳ್ಳುವ ಬಗ್ಗೆ ಎಸ್​ಐಟಿ ಮುಖ್ಯಸ್ಥರು ತೀರ್ಮಾನಿಸುತ್ತಾರೆ: ಸಚಿವ ಬೊಮ್ಮಾಯಿ - ರಮೇಶ್ ಆಪ್ತರಿಂದ ದೂರು

ಸದ್ಯ ತನಿಖೆ ನಡೆಯುತ್ತಿದೆ, ಎಲ್ಲವೂ ಹೊರಗೆ ಬರುತ್ತೆ ಎಂಬ ವಿಶ್ವಾಸ ಇದೆ. ದೂರಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದರ ಬಗ್ಗೆ ಎಸ್​​​ಐಟಿಯವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಚಿವ ಬೊಮ್ಮಾಯಿ
ಸಚಿವ ಬೊಮ್ಮಾಯಿ

By

Published : Mar 13, 2021, 7:32 PM IST

ಬೆಂಗಳೂರು: ರಮೇಶ್ ಆಪ್ತರು ಪೊಲೀಸ್ ಠಾಣೆಗೆ ದೂರು ನೀಡುದ್ದು, ಅದರನ್ವಯ ದೂರು ದಾಖಲಾಗುತ್ತದೆ. ಬಳಿಕ ಮುಂದಿನ ಕ್ರಮವನ್ನು ಕಾನೂನಾತ್ಮಕವಾಗಿ ಪೊಲೀಸರು ತೆಗೆದುಕೊಳ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ರಮೇಶ್ ಆಪ್ತರಿಂದ ದೂರು ವಿಚಾರವಾಗಿ ಕೆಕೆ ಗೆಸ್ಟ್ ಹೌಸ್​ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ದೂರನ್ನು ಎಸ್​ಐಟಿಗೆ ತೆಗೆದು ಕೊಳ್ಳಬೇಕಾ, ಬೇಡವಾ ಎಂಬುದರ ಬಗ್ಗೆ ಎಸ್​ಐಟಿ ಮುಖ್ಯಸ್ಥರು ತೀರ್ಮಾನ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.

ಸಚಿವ ಬಸವರಾಜ ಬೊಮ್ಮಾಯಿ

ಒಂದು ಸಾರಿ ಎಸ್ಐಟಿಗೆ ಕೊಟ್ಟ ಮೇಲೆ ನಾನು ಯಾವುದೇ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ. ಸದ್ಯ ತನಿಖೆ ನಡೆಯುತ್ತಿದೆ, ಎಲ್ಲವೂ ಹೊರಗೆ ಬರುತ್ತೆ ಎಂಬ ವಿಶ್ವಾಸ ಇದೆ. ದೂರಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದರ ಬಗ್ಗೆ ಎಸ್​ಐಟಿಯವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಇದನ್ನೂ ಓದಿ.. ಮೋದಿ, ಬೈಡನ್​, ಸ್ಕಾಟ್​ ಹೆಣೆದ ಲಸಿಕೆ ಬಲೆಯಲ್ಲಿ 'ಚೀನಾ' ವಿಲವಿಲ.. ಭಾರತದಿಂದ ಮಾತ್ರ ಸಾಧ್ಯವೆಂದ ಕ್ವಾಡ್​!

ABOUT THE AUTHOR

...view details