ಕರ್ನಾಟಕ

karnataka

ETV Bharat / city

ಸಿಎಂ, ಸಚಿವರು ಕಲಾಪಕ್ಕೆ ಹಾಜರಾಗಿ ಉತ್ತರ ಕೊಡಬೇಕು: ಸಭಾಪತಿ ಹೊರಟ್ಟಿ - ಪ್ರಶ್ನೋತ್ತರ ಅವಧಿ 75 ನಿಮಿಷ

ಎರಡು ದಿನಗಳ ಮುಂಚೆ ವಿಧೇಯಕ ಕರಡು ಪ್ರತಿ ಕೊಡಬೇಕು. ನಾಳೆ ಮತ್ತು ನಾಡಿದ್ದು ಚುನಾವಣೆ ಬಗ್ಗೆ ಪರಿಷತ್​ನಲ್ಲಿ ಅವಕಾಶ ಕೊಡುತ್ತೇವೆ. ಪ್ರಶ್ನೋತ್ತರ ಅವಧಿ 75 ನಿಮಿಷದ ಒಳಗೆ ಮುಗಿಸಲೇಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸಭಾಪತಿ ಹೊರಟ್ಟಿ
ಸಭಾಪತಿ ಹೊರಟ್ಟಿ

By

Published : Mar 3, 2021, 7:01 PM IST

ಬೆಂಗಳೂರು: ಮುಖ್ಯಮಂತ್ರಿಗಳು ಸೇರಿದಂತೆ ಆಯಾ ಇಲಾಖೆ ಸಚಿವರೇ ಬಂದು ಸದನದಲ್ಲಿ ಉತ್ತರ ಕೊಡಬೇಕು. ತರಾತುರಿಯಲ್ಲಿ ಕರಡು ಮಂಡಿಸಲು ಅವಕಾಶ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಾಳೆಯಿಂದ ಆರಂಭವಾಗುವ ವಿಧಾನ ಪರಿಷತ್ ಅಧಿವೇಶನ ಹಿನ್ನೆಲೆ ಸದನದ ಕಲಾಪಗಳು ಸುಗಮವಾಗಿ ನಡೆಯುವ ಕುರಿತು ಪ್ರಶ್ನೋತ್ತರ ನಿಯಮಗಳ ಅಡಿಯಲ್ಲಿ ತೆಗೆದುಕೊಳ್ಳುವ ಇತರೆ ವಿಷಯಗಳು ಹಾಗೂ ವಿಧೇಯಕಗಳ ಮೇಲೆ ಚರ್ಚೆ ನಡೆಸುವ ಸಂಬಂಧ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಮುಂಚೆ ವಿಧೇಯಕ ಕರಡು ಪ್ರತಿ ಕೊಡಬೇಕು. ನಾಳೆ ಮತ್ತು ನಾಡಿದ್ದು ಚುನಾವಣೆ ಬಗ್ಗೆ ಪರಿಷತ್​ನಲ್ಲಿ ಅವಕಾಶ ಕೊಡುತ್ತೇವೆ. ಪ್ರಶ್ನೋತ್ತರ ಅವಧಿ 75 ನಿಮಿಷದ ಒಳಗೆ ಮುಗಿಸಲೇಬೇಕು ಎಂದು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಭಾಪತಿ ಹೊರಟ್ಟಿ

ಸಭೆಯಲ್ಲಿ ಅಜೆಂಡಾದಲ್ಲಿ ಇರುವ ವಿಚಾರಗಳು ಅಂದೇ ಮುಗಿಸಬೇಕು. ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುವ ವಿಷಯಕ್ಕೆ ಕನಿಷ್ಠ ಎರಡು ದಿನಗಳಲ್ಲಿ ಸರ್ಕಾರ ಉತ್ತರ ಕೊಡಬೇಕು ಎಂಬ ನಿಟ್ಟಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಮುಖಂಡರ ಜೊತೆ ಚರ್ಚೆ ನಡೆಸಲಾಯಿತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸದನ‌ ನಡೆಸಲಾಗುವುದು. ವಿಧಾನಪರಿಷತ್​ನಲ್ಲಿ ಬಿಲ್​ಗಳ ಬಗ್ಗೆ ಚರ್ಚೆ ಆಗಬೇಕು, ಇದರಿಂದ ಸರ್ಕಾರಕ್ಕೆ ಸೂಕ್ತ ಸಮಯದಲ್ಲಿ ಸೂಚನೆಗಳನ್ನು ನೀಡಬಹುದು. ಹಿಂದೆ ನಡೆದ ಘಟನಾವಳಿಗಳು ಮರುಕಳಿಸದಂತೆ ಮುಖಂಡರ ಜೊತೆ ಚರ್ಚೆ ನಡೆಸಲಾಯಿತು.

ವಿಧಾನ ಪರಿಷತ್​ನಲ್ಲಿ ಈ ಬಾರಿ ಸಂಪೂರ್ಣ ಮೊಬೈಲ್ ನಿಷೇಧ ಮಾಡುತ್ತಿದ್ದೇವೆ. ಈ ಬಾರಿ ಮೊಬೈಲ್​ಗೆ ಸಂಬಂಧಿಸಿದ ಸುದ್ದಿ ಸಿಗುವುದಿಲ್ಲ. ಸಭಾಪತಿ ಆಗಿರುವುದರಿಂದ ವಿಡಿಯೋ ಸಿಡಿ ಸಂಬಂಧ ನಾನು ಯಾವುದೇ ಪ್ರತಿಕ್ರಿಯೆ ಕೊಡಲು ಆಗುವುದಿಲ್ಲ ಎಂದರು.

ಇದನ್ನೂ ಓದಿ..ರಮೇಶ್​ ಜಾರಕಿಹೊಳಿ‌ ಬೆಂಬಲಿಗರಿಂದ ಹೆಚ್ಚು ಬಸ್​ಗಳ ಮೇಲೆ ಕಲ್ಲು ತೂರಾಟ ಆರೋಪ

ABOUT THE AUTHOR

...view details