ಬೆಂಗಳೂರು:ರಾಜ್ಯದಲ್ಲಿಂದು ಕೊರೊನಾ ರೌದ್ರಾವತಾರ ಮುಂದುವರೆದಿದ್ದು, ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸುತ್ತಿದೆ.
ರಾಜ್ಯದಲ್ಲಿಂದು ದಾಖಲೆಯ ಕೊರೊನಾ ಪ್ರಕರಣ: 80 ಮಂದಿ ಬಲಿ!
ಸತತ ಒಂದು ವಾರದಿಂದ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟುತ್ತಿದ್ದು, ಇಂದು ಒಂದೇ ದಿನ 17,489 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,41,998ಕ್ಕೆ ಏರಿಕೆ ಆಗಿದೆ. ಇಂದು 80 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 13,270ಕ್ಕೆ ಏರಿಕೆ ಆಗಿದೆ.

ಇತ್ತ 5,565 ಮಂದಿ ಗುಣಮುಖರಾಗಿದ್ದು, ಈವರೆಗೆ 10,09,549 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 1,19,160ಕ್ಕೆ ಏರಿದ್ದು, 589 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳು ಶೇಕಡಾವಾರು 12.20ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.45ಕ್ಕೆ ಏರಿದೆ.
ಒಂದೇ ವಾರದಲ್ಲಿ ಸೋಂಕಿತರು ಸಾವಿನ ಸಂಖ್ಯೆ ಏರಿಕೆ
ದಿನ | ಸೋಂಕಿತರ ಸಂಖ್ಯೆ | ಮೃತರ ಸಂಖ್ಯೆ |
ಏಪ್ರಿಲ್-11 | 10,250 | 40 |
ಏಪ್ರಿಲ್-12 | 9,579 | 52 |
ಏಪ್ರಿಲ್-13 | 8,778 | 67 |
ಏಪ್ರಿಲ್-14 | 11,265 | 38 |
ಏಪ್ರಿಲ್-15 | 14,738 | 66 |
ಏಪ್ರಿಲ್-16 | 14,859 | 78 |
ಏಪ್ರಿಲ್-17 | 17,489 | 80 |