ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಅಂಗಡಿಯೊಂದರಲ್ಲಿ ನಿಗದಿತ ಬೆಲೆಗಿಂತ ದುಪ್ಪಟ್ಟು ಬೆಲೆಯಲ್ಲಿ ದಿನಸಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಂದಿದ್ದನ್ನ ಆಧರಿಸಿ ದಾಳಿ ಮಾಡಿದ್ದಾರೆ.
ಅಧಿಕ ಬೆಲೆಗೆ ದಿನಸಿ ಮಾರಾಟ: ಅಂಗಡಿ ಮುಚ್ಚಿಸಿದ ಪೊಲೀಸರು - Bangalore News
ದೇಶವೇ ಲಾಕ್ಡೌನ್ ಆದ ಪರಿಣಾಮ ಕೆಲವರು ಇದನ್ನೇ ಅವಕಾಶವೆಂಬಂತೆ ಹಣ ಮಾಡವ ದಂಧೆಯಲ್ಲಿ ತೊಡಗಿದ್ದಾರೆ.
![ಅಧಿಕ ಬೆಲೆಗೆ ದಿನಸಿ ಮಾರಾಟ: ಅಂಗಡಿ ಮುಚ್ಚಿಸಿದ ಪೊಲೀಸರು Groceries at high prices. .. police closed the shop](https://etvbharatimages.akamaized.net/etvbharat/prod-images/768-512-6633374-868-6633374-1585823798931.jpg)
ಅಧಿಕ ಬೆಲೆಗೆ ದಿನಸಿ ಮಾರಾಟ..ಅಂಗಡಿ ಮುಚ್ಚಿಸಿದ ಪೊಲೀಸರು
ಅಂಗಡಿಯಲ್ಲಿ 35 ರೂಪಾಯಿ ಸಕ್ಕರೆಗೆ 55 ರೂ. ಬದಲು 72 ರೂ., ಅಡುಗೆ ಎಣ್ಣೆಗೆ 110 ರೂಪಾಯಿ ಹೀಗೆ ವಿವಿಧ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಮಾಹಿತಿ ಮೇರೆಗೆ ದಾಳಿ ನಡೆಸಿದ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರಾಜೀವ್ ಹಾಗೂ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಂಗಡಿ ಮುಚ್ಚಿಸಿದ್ದಾರೆ.