ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಹೀಗಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಲಾಕ್ಡೌನ್ನಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದರೂ ಜನರು ಮಾತ್ರ ಸುತ್ತಾಡುವುದನ್ನು ಬಿಡುತ್ತಿಲ್ಲ.
ಮನೆ ಮನೆಗೆ ತೆರಳಿ ಕೊರೊನಾ ಕುರಿತು ಜಾಗೃತಿ ಮೂಡಿಸಿದ ಕೋಣನಕುಂಟೆ ಪೊಲೀಸರು - The police made the public aware about corona virus
ಮನೆಯಲ್ಲಿ ಇದ್ದರೆ ಸುರಕ್ಷಿತವಾಗುತ್ತೀರಿ. ಇಲ್ಲವಾದರೆ ಕಷ್ಟ ಅನುಭವಿಸುತ್ತೀರಾ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೂ ಜನರು ಇಲಾಖೆ ಎಚ್ಚರಿಕೆಯನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.
ಜಾಗೃತಿ ಮೂಡಿಸುತ್ತಿರುವ ಪೊಲೀಸರು
ಈ ನಿಟ್ಟಿನಲ್ಲಿ ಇಂದು ದಕ್ಷಿಣ ವಿಭಾಗದ ಕೋಣನಕುಂಟೆ ಠಾಣಾ ವ್ಯಾಪ್ತಿ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸರು ಮನೆ ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ಅಲದೆ, ಲಾಕ್ಡೌನ್ ಮುಗಿಯುವವರೆಗೂ ಹೊರ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.