ದೇವನಹಳ್ಳಿ :ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 15 ಮಂದಿ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ ವಿದೇಶಿ ಪ್ರಯಾಣಿಕರನ್ನ ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ಬಂದ ವರದಿಯಲ್ಲಿ 15 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಅಮೆರಿಕದಿಂದ -5, ಜರ್ಮನಿ- 2, ಟರ್ಕಿ-2, ಕೆನಡಾ -1, ಫ್ರಾನ್ಸ್ -2, ಬ್ರೆಜಿಲ್-1 ಹಾಗೂ ಸ್ವೀಡನ್ನಿಂದ ಬಂದ ಇಬ್ಬರು ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಸೋಂಕಿತರನ್ನು ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಕೋವಿಡ್ ನೆಗೆಟಿವ್ ಬಂದ ಪ್ರಯಾಣಿಕರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ನಿಟ್ಟುಸಿರು ಬಿಟ್ಟ ಭಾರತ.. ತಗ್ಗಿದ ಕೋವಿಡ್ ಏರಿಕೆ ಪ್ರಮಾಣ.. ಇಂದು 2.68 ಲಕ್ಷ ಕೇಸ್