ಕರ್ನಾಟಕ

karnataka

ETV Bharat / city

ಆ. 30 ರಂದು ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ ಅತಿ ದೊಡ್ಡ ಪ್ರಯಾಣಿಕರ ವಿಮಾನ ಏರ್ ಬಸ್ A 380 - Airbus A 380

ಎಮಿರೇಟ್ಸ್ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಯು ದುಬೈ - ಬೆಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭಿಸಿದ್ದು, ಮುಂಬರುವ ಆಕ್ಟೋಬರ್ 30 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿದೊಡ್ಡ ಪ್ರಯಾಣಿಕರ ವಿಮಾನ ಏರ್ ಬಸ್ A 380 ಲ್ಯಾಂಡ್ ಆಗಲಿದೆ.

Airbus A380
ಏರ್ ಬಸ್ A 380

By

Published : Aug 17, 2022, 9:50 AM IST

ದೇವನಹಳ್ಳಿ: ಇದೇ ಮೊದಲ ಬಾರಿಗೆ ಆಕ್ಟೋಬರ್ 30 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿದೊಡ್ಡ ಪ್ರಯಾಣಿಕರ ವಿಮಾನ 'ಏರ್ ಬಸ್ A 380' ಲ್ಯಾಂಡ್ ಆಗಲಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅತಿ ದೊಡ್ಡ ಏರ್ ಬಸ್ ಭೂಸ್ವರ್ಶ ಮಾಡಲಿದೆ.

ಎಮಿರೇಟ್ಸ್ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಯು ದುಬೈ - ಬೆಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭಿಸಿದೆ. ಇದರ ಫಲವಾಗಿ ದುಬೈ- ಬೆಂಗಳೂರು ನಡುವೆ ಅತಿ ದೊಡ್ಡ ಪ್ರಯಾಣಿಕರ ವಿಮಾನ ಏರ್ ಬಸ್ A 380 ಸಂಚಾರ ನಡೆಸಲಿದೆ. ದುಬೈನಿಂದ ಟೇಕ್ ಆಫ್ ಆದ ಏರ್ ಬಸ್ ಆಕ್ಟೋಬರ್ 30 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.

ಏರ್ ಬಸ್ A 380ಯ ಬಿಸಿನೆಸ್ ಕ್ಲಾಸ್, ಫಸ್ಟ್ ಕ್ಲಾಸ್​ನಲ್ಲಿ ಪ್ರೀಮಿಯಂ ಕ್ಯಾಬಿನ್ ಸೇವೆ ನೀಡಲಾಗಿದೆ. ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಕರಿಗೆ ಸೀಟ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ಶ್ರೀಲಂಕಾ ವಾಯುಪಡೆಗೆ ಡಾರ್ನಿಯರ್ ವಿಮಾನ ಗಿಫ್ಟ್ ನೀಡಿದ ಭಾರತ

ABOUT THE AUTHOR

...view details