ಕರ್ನಾಟಕ

karnataka

ETV Bharat / city

ದೇವಸ್ಥಾನ ನೆಲಸಮಗೊಳಿಸುವ ವಿಚಾರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು: ಸಿದ್ದರಾಮಯ್ಯ ನೇರ ಆರೋಪ

ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ದೇವಸ್ಥಾನ ನೆಲಸಮಗೊಳಿಸುವ ವಿಚಾರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

The government already knew about the demolition of the temple: Siddaramaiah
ದೇವಸ್ಥಾನ ನೆಲಸಮಗೊಳಿಸುವ ವಿಚಾರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು: ಸಿದ್ದರಾಮಯ್ಯ

By

Published : Sep 15, 2021, 1:31 PM IST

ಬೆಂಗಳೂರು: ಸಾರ್ವಜನಿಕರ ಒತ್ತಡ ಹೆಚ್ಚಿದ ಹಿನ್ನೆಲೆ ರಾಜ್ಯ ಸರ್ಕಾರ ದೇವಸ್ಥಾನ ನೆಲಸಮಗೊಳಿಸುವ ವಿಚಾರದಲ್ಲಿ ಬಣ್ಣ ಬದಲಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರ ಜೊತೆ ಮಾತನಾಡಿ, ನಂಜನಗೂಡು ದೇವಸ್ಥಾನ ನೆಲಸಮ ಸರ್ಕಾರದ ಗಮನದಲ್ಲಿ ಇತ್ತು. ಸಿಎಸ್ ಪತ್ರ ಬರೆದಿದ್ದರು.

15 ರಿಂದ ಎಲ್ಲಾ ಅನಧಿಕೃತ ದೇವಾಸ್ಥಾನಗಳು ನೆಲಸಮ ಮಾಡಬೇಕು ಅಂತ ಹೇಳಲಾಗಿತ್ತು. ಈಗ ಸಾರ್ವಜನಿಕರಿಂದ ಒತ್ತಾಯ ಹೆಚ್ಚಾದ ನಂತರ ಸರ್ಕಾರ ಬಣ್ಣ ಬದಲಸಿದೆ. ಇವರ ಗಮನಕ್ಕೆ ಬಾರದೇ ಒಡೆದಿರ್ತಾರಾ‌‌? ಎಂದು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇವರು ಹೇಳೋದು ಹಿಂದುತ್ವ. ಹಿಂದೂ ದೇವಾಲಯವನ್ನ ಇವರ ಸರ್ಕಾರವೇ ನಾಶ ಮಾಡಿದೆ. ಮಾತು ರಾಮನ ಜಪ, ಇಲ್ಲಿ ದೇವಸ್ಥಾನ ಕೆಡವೋದು. ಗಮನಕ್ಕೆ ತಾರದೆ ಯಾವುದೇ ಚರ್ಚೆ ಮಾಡದೆ ನೆಲಸಮ ಮಾಡಿದ್ದು, ಇವರ ಡೋಂಗಿತನ. ಹುಸಿ ಹಿಂದುತ್ವ ತೋರಿಸುತ್ತೆ. ಇವರಿಗೆ ರಾಜಕೀಯ ಹಿಂದುತ್ವ. ದೇವರು ಹಾಗೂ ದೇವಸ್ಥಾನದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ ಎಂದರು.

'ಆಪರೇಷನ್ ಮಾಡುತ್ತಿಲ್ಲ'
ನಾವೇನು ಆಪರೇಷನ್ ಜೆಡಿಎಸ್ ಮಾಡ್ತಿಲ್ಲ. ಜಿ.ಟಿ.ದೇವೆಗೌಡರು ಮಾತಾಡಿದ್ದಾರೆ. ಬೇರೆ ಯಾರೂ ಮಾತಾಡಿಲ್ಲ. ಶ್ರೀನಿವಾಸ ಗೌಡ ಡಿಕೆಶಿ ಮಾತನಾಡಿದ್ದು ಗೊತ್ತಿಲ್ಲ. ಯಾರು ನಮ್ಮ ಪಕ್ಷದ ತತ್ವ ಸಿದ್ಧಾಂತ ನಂಬಿ ಬರ್ತಾರೋ ಅವರಿಗೆ ಸ್ವಾಗತ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ABOUT THE AUTHOR

...view details