ಕರ್ನಾಟಕ

karnataka

ETV Bharat / city

ಚಾಲಕನನ್ನು ಥಳಿಸಿದ ಅತ್ತಿಬೆಲೆ ಟೋಲ್ ಸಿಬ್ಬಂದಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು - ಹೊಸೂರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಟೋಲ್​ ಹೊಸದಾಗಿ ಹಾಕಿಸಿದ್ದ ಫಾಸ್ಟ್ ಟ್ಯಾಗ್ ರೀಡ್ ಆಗಿದ್ದು, ತುಸು ತಡವಾಗಿದ್ದಕ್ಕೆ ಇಡೀ ದಿನ ಸಿಬ್ಬಂದಿ ಹಾಗೂ ಚಾಲಕರ ನಡುವೆ ಗಲಾಟೆ ನಡೆದ ಘಟನೆ ಕಂಡುಬಂದಿತು.

The fight between toll staff and driver in Anekal
ಟೋಲ್ ಸಿಬ್ಬಂದಿ ಮತ್ತು ವಾಹನ ಚಾಲಕರ ನಡುವೆ ಗಲಾಟೆ

By

Published : Feb 27, 2020, 9:04 PM IST

Updated : Feb 27, 2020, 11:17 PM IST

ಆನೇಕಲ್: ಬೆಂಗಳೂರು - ಹೊಸೂರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಟೋಲ್​ ಹೊಸದಾಗಿ ಹಾಕಿಸಿದ್ದ ಫಾಸ್ಟ್ ಟ್ಯಾಗ್ ರೀಡ್ ಆಗಿದ್ದು, ತುಸು ತಡವಾಗಿದ್ದಕ್ಕೆ ಇಡೀ ದಿನ ಸಿಬ್ಬಂದಿ ಹಾಗೂ ಚಾಲಕರ ನಡುವೆ ಗಲಾಟೆ ನಡೆದ ಘಟನೆ ಕಂಡುಬಂದಿತು.

ಟೋಲ್ ಸಿಬ್ಬಂದಿ ಮತ್ತು ವಾಹನ ಚಾಲಕರ ನಡುವೆ ಗಲಾಟೆ

ಬೆಳಗ್ಗೆ ಹೊರಡುವಾಗ ಬೊಲೆರೋ ಪಿಕಪ್​ ವಾಹನವೊಂದು ಫಾಸ್ಟ್ ಟ್ಯಾಗ್ ರೀಡ್ ಆಗಿ ತಮಿಳುನಾಡಿನ ಕೃಷ್ಣಗಿರಿ ಕಡೆಗೆ ಹೊರಟು ಮತ್ತೆ ಅಲ್ಲಿಯೂ ಟೋಲ್​ನಲ್ಲಿ ರೀಡ್ ಆಗಿ ಮತ್ತೆ ಅತ್ತಿಬೆಲೆ ಟೋಲ್​ನಲ್ಲಿ ರೀಡ್ ಆಗುವುದು ತಡವಾಗಿದೆ. ಹೀಗಾಗಿ ಟೋಲ್ ಸಿಬ್ಬಂದಿ ಮತ್ತು ಚಾಲಕ ಹಾಗೂ ಆತನ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಟೋಲ್​ ಸಿಬ್ಬಂದಿ, ಚಾಲಕ ಮತ್ತು ಆತನ ಸ್ಮೇಹಿತರನ್ನು ಮನಸೋ ಇಚ್ಚೆ ಪೈಪ್​ಗಳಿಂದ ಥಳಿಸಿ ಗಾಯಗೊಳಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಜಗದೀಶ್ ಪಿಕಪ್ ವಾಹನದ ಚಾಲಕ ಎಂದು ತಿಳಿದುಬಂದಿದೆ. ಗಲಾಟೆ ಹಿನ್ನೆಲೆ ಸ್ಥಳಕ್ಕೆ ವ್ಯಾಜ್ಯ ಚಾಲಕ ಸಂಘದ ಅಧ್ಯಕ್ಷ ಆಗಮಿಸಿ, ಪ್ರಕರಣ ದಾಖಲಾಗಲೇ ಬೇಕು ಎಂದು ಪಟ್ಟು ಹಿಡಿದರು. ಈ ಸಂಬಂಧ ಅತ್ತಿಬೆಲೆ ಪೊಲೀಸರು ಟೋಲ್ 7 ಜನ ಸಿಬ್ಬಂದಿ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Feb 27, 2020, 11:17 PM IST

For All Latest Updates

ABOUT THE AUTHOR

...view details