ಕರ್ನಾಟಕ

karnataka

ETV Bharat / city

ಪ್ರಮುಖ ಸ್ಥಳಗಳಲ್ಲಿ ಸ್ತ್ರೀ ಶೌಚಾಲಯ ಇರಬೇಕು: ಶ್ರುತಿ - Department of Tourism

ನಿಗಮದ ಅನುಷ್ಠಾನ, ಶೌಚಾಲಯಗಳ ಬಳಕೆ ಹಾಗೂ ಮಹಿಳೆಯರಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ತ್ರೀ ಶೌಚಾಲಯಗಳ ಅವಶಕ್ಯತೆ ಬಹಳಷ್ಟು ಇದ್ದು, ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದರು.

ಶ್ರುತಿ
ಶ್ರುತಿ

By

Published : Jan 21, 2021, 8:21 PM IST

ಬೆಂಗಳೂರು:ನಟಿ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ,‌ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೆಎಸ್​ಆರ್​ಟಿಸಿ ನಿಗಮ ಅನುಷ್ಠಾನಗೊಳಿಸಿರುವ ಸ್ತ್ರೀ ಶೌಚಾಲಯವನ್ನು ವೀಕ್ಷಿಸಿದರು.

ನಿಗಮದ ಅನುಷ್ಠಾನ, ಶೌಚಾಲಯಗಳ ಬಳಕೆ ಹಾಗೂ ಮಹಿಳೆಯರಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ತ್ರೀ ಶೌಚಾಲಯಗಳ ಅವಶಕ್ಯತೆ ಬಹಳಷ್ಟು ಇದ್ದು, ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದರು.

ಸ್ತ್ರೀ ಶೌಚಾಲಯ ವೀಕ್ಷಿಸಿದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ
ಸ್ತ್ರೀ ಶೌಚಾಲಯ ವೀಕ್ಷಿಸಿದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ
ಸ್ತ್ರೀ ಶೌಚಾಲಯ ವೀಕ್ಷಿಸಿದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ

ಮೆಜೆಸ್ಟಿಕ್​ ಕೆಎಸ್​ಆರ್​ಟಿಸಿ ನಿಲ್ದಾಣದ ಒಂದನೇ ಟರ್ಮಿನಲ್​ ಪ್ರವೇಶ ದ್ವಾರದ ಬಳಿ ಈ ವಿಶೇಷ ಶೌಚಾಲಯವಿದ್ದು, ಗುಜರಿ ಬಸ್​ವೊಂದನ್ನು ಹೈಟೆಕ್​​ ಶೌಚಾಲಯವನ್ನಾಗಿ ಪರಿವರ್ತಿಸಲಾಗಿದೆ. ಈ ಮೂಲಕ ಅನುಪಯುಕ್ತ ಬಸ್​ ಬಳಸಿಕೊಂಡು ಅತ್ಯಾಧುನಿಕ ಶೌಚಾಲಯವನ್ನಾಗಿ ಮಾಡಿದ ದೇಶದ ಮೊದಲ ನಿಗಮವಾಗಿ ಕೆಎಸ್​​ಆರ್​ಟಿಸಿ ಗುರ್ತಿಸಿಕೊಂಡಿದೆ. 12 ಮೀಟರ್​​ ಉದ್ದದ ಬಸ್​​ನಲ್ಲಿ ಇಂಡಿಯನ್​​ ಹಾಗೂ ವೆಸ್ಟ್ರನ್​​ ಶೌಚಾಲಯಗಳು ಇವೆ.

ABOUT THE AUTHOR

...view details