ಕರ್ನಾಟಕ

karnataka

ETV Bharat / city

35 ಕೂಲಿ ಕಾರ್ಮಿಕರ ಕುಟುಂಬಗಳನ್ನು ದತ್ತು ಪಡೆದ ಆಡುಗೋಡಿ ಪೊಲೀಸರು - ಕೂಲಿ ಕಾರ್ಮಿಕರಿಗೆ ನೆರವು

ಬೆಂಗಳೂರಿನ ಲಕ್ಕಸಂದ್ರದ ಗುಲ್ಬರ್ಗಾ ಕಾಲೊನಿಯಲ್ಲಿ ವಾಸಿಸುತ್ತಿರುವ 35 ಕೂಲಿ ಕಾರ್ಮಿಕರ ಕುಟುಂಬಗಳಿಗೆ ಲಾಕ್​​ಡೌನ್​ ಮುಗಿಯುವ ತನಕ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ಆಡುಗೋಡಿ ಪೊಲೀಸರು ನೋಡಿಕೊಳ್ಳಲಿದ್ದಾರೆ.

The adopted police
ದತ್ತು ಪಡೆದ ಪೊಲೀಸರು

By

Published : Apr 20, 2020, 6:47 PM IST

ಬೆಂಗಳೂರು: ಲಾಕ್​ಡೌನ್​​​​ನಿಂದಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಜೋಪಡಿ ಹಾಗೂ ಶೆಡ್​​ಗಳಲ್ಲಿ ವಾಸಿಸುವ ವಲಸಿಗ ಕೂಲಿ ಕಾರ್ಮಿಕರ 35 ಕುಟುಂಬಗಳನ್ನು ಪೊಲೀಸರು ದತ್ತು ತೆಗೆದುಕೊಂಡಿದ್ದಾರೆ.

ಲಾಕ್​ಡೌನ್​ ಜಾರಿ ಆದಾಗಿನಿಂದ ಈವರೆಗೂ ಕಾರ್ಮಿಕರು, ಬಡವರು ಮತ್ತು ನಿರ್ಗತಿಕರು ಊಟ, ನೀರಿಲ್ಲದೆ ದಿನ ದೂಡುತ್ತಿದ್ದಾರೆ. ಸಂಕಷ್ಟದಲ್ಲಿ ಇರುವವರ ನೆರವಿಗೆ ಬೆಂಗಳೂರಿನ ಆಡುಗೋಡಿ ಪೊಲೀಸರು ಮುಂದಾಗಿದ್ದಾರೆ.

ಲಕ್ಕಸಂದ್ರದ ಗುಲ್ಬರ್ಗ ಕಾಲೊನಿಯಲ್ಲಿ ನೆಲೆಸಿರುವ 35 ಕುಟುಂಬಗಳ ನೂರಾರು ಜನರಿಗೆ ಲಾಕ್​​​​​ಡೌನ್ ಮುಗಿಯುವ ತನಕ ಅಗತ್ಯ ವಸ್ತುಗಳ ಕೊರತೆ ಬಾರದಂತೆ ನೋಡಿಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ದಿನಗೂಲಿ ಕಾರ್ಮಿಕರಿಗೆ ದಿನಸಿ ವಿತರಿಸಿದ ಆಡುಗೋಡಿ ಪೊಲೀಸರು

ಯಾದಗಿರಿ, ರಾಯಚೂರು, ಕಲಬುರಗಿ ಭಾಗದ ಕಾರ್ಮಿಕರು ಹಲವು ವರ್ಷಗಳಿಂದ ಇಲ್ಲಿಯೇ ಕಟ್ಟಡ ನಿರ್ಮಾಣದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ‌‌‌‌‌. ಲಾಕ್​ಡೌನ್​ ಹೇರಿದ ಪರಿಣಾಮ ದುಡಿಯಲು ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ, ಊರಿಗೂ ಹೋಗಲಾರದೆ ಬದುಕು ಅತಂತ್ರವಾಗಿದೆ.

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಸ್ಥಿತಿ‌ ಕಂಡ ಇನ್​​​​ಸ್ಪೆಕ್ಟರ್ ದಿಲೀಪ್ ಕುಮಾರ್ ಅವರು, ಠಾಣೆ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿ, ಸ್ವಯಂಪ್ರೇರಿತ ಸಹಾಯ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಗುಲ್ಬರ್ಗ ಕಾಲೊನಿಯಲ್ಲಿ ಆಹಾರ ವಿತರಿಸುತ್ತಿರುವ ಪೊಲೀಸರು

ಸಿಬ್ಬಂದಿ ತನು- ಮನದಿಂದಲೇ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದರು. ಇದರಂತೆ ಲಾಕ್​​​ಡೌನ್ ಘೋಷಣೆಯಾದ ದಿನದಿಂದಲೂ ದಿನಸಿ ಕಿಟ್ ನೀಡಲಾಗುತ್ತಿದೆ. ಅಕ್ಕಿ, ಎಣ್ಣೆ, ಉಪ್ಪು, ಮಸಾಲೆ, ಅರಿಶಿನ, ಬೇಳೆ, ಟೂತ್ ಫೇಸ್ಟ್, ತರಕಾರಿ ವಿತರಿಸಲಾಗುತ್ತದೆ ಎಂದು 'ಈಟಿವಿ ಭಾರತ್​'ಗೆ ಇನ್​​ಸ್ಪೆಕ್ಟರ್ ದಿಲೀಪ್ ಕುಮಾರ್​​​ ಮಾಹಿತಿ ನೀಡಿದರು.

ಒಂದೇ ಬಾರಿಗೆ ಹೆಚ್ಚು ಪಡಿತರ ವಿತರಿಸಿದರೆ ದುರುಪಯೋಗವಾಗುವ ಸಾಧ್ಯತೆಯಿದೆ. ಹೀಗಾಗಿ, ಎರಡು ದಿನಕ್ಕೊಮ್ಮೆ ಅವರ ಬೇಕು-ಬೇಡಿಕೆಗಳನ್ನು ನಾವೇ ಹೋಗಿ ಪರಿಶೀಲಿಸುತ್ತೇವೆ. ಲಾಕ್​​ಡೌನ್ ಮುಗಿಯುವ ತನಕ ಕೈಲಾದಷ್ಟು ಸಹಾಯ ಮಾಡಲಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details