ಕರ್ನಾಟಕ

karnataka

ETV Bharat / city

19 ಲಕ್ಷ ಇವಿಎಂ ನಾಪತ್ತೆ ಪ್ರಕರಣ ತನಿಖೆ ಸುಪ್ರೀಂ ಕೋರ್ಟ್ ಮೂಲಕ ನಡೆಯಲಿ: ಹೆಚ್ ​ಕೆ ಪಾಟೀಲ್ - ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ ಪಾಟೀಲ್

H K Patil speaks on EVM missing case.. ಇವಿಎಂ ಮಷಿನ್ ಹ್ಯಾಕ್ ಮಾಡುವ ಬಗ್ಗೆ ಬಹಳಷ್ಟು ಜನರಿಗೆ ಅನುಮಾನವಿದೆ. ಇದನ್ನು ಹೋಗಲಾಡಿಸಬೇಕಾದ್ರೆ ಎಥಿಕಲ್ ಹ್ಯಾಕಥಾನ್ ಆಗಬೇಕು. ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಇದನ್ನು ಮಾಡಬೇಕು ಎಂದು ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಒತ್ತಾಯಿಸಿದ್ದಾರೆ.

Maharashtra State Congress in charge H.K.Patil
ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ ಪಾಟೀಲ್

By

Published : May 8, 2022, 5:12 PM IST

Updated : May 8, 2022, 5:35 PM IST

ಬೆಂಗಳೂರು: ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಇವಿಎಂ ಯಂತ್ರ ಕಾಣೆಯಾಗಿರುವ ಬಗ್ಗೆ ಹಲವು ಮಹತ್ವದ ದಾಖಲೆ ನೀಡಿದ್ದೇನೆ ಎಂದು ಮಾಜಿ ಸಚಿವ ಹಾಗೂ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್​ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ನಮ್ಮ ಸಭಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಈ ಸಂದರ್ಭ 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಪುರಾವೆಗಳು ಮತ್ತು ಕಾಗದ ಪತ್ರಗಳನ್ನು ನೀಡಿದ್ದೇನೆ. ವಿಧಾನಸಭೆಯಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ‌. ನಾನು ಸಹ ಚರ್ಚೆಯಲ್ಲಿ ಭಾಗಿಯಾಗಿದ್ದೆ. ಹಲವಾರು ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಿದ್ದರು. ನಾನು ಮಾತಾಡುವಾಗ ಸದನದ ನಾಲ್ಕೈದು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೆ ಎಂದರು.

ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲನೇಯದು ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಪ್ರಸ್ತಾಪ ಮಾಡಿದ್ದೆ‌. ನ್ಯಾಯಾಲಯಗಳಲ್ಲಿ ಎಲೆಕ್ಷನ್ ಅರ್ಜಿಗಳ ವಿಚಾರಣೆಗೆ ತಡವಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದೆ. ಪ್ರಕರಣ ಇತ್ಯರ್ಥಗೊಳಿಸುವ ವಿಚಾರದಲ್ಲಿ ಅವಮಾನ ಆಗುವ ರೀತಿ ವಿಳಂಬ ಮಾಡುತ್ತಾರೆ. ಚುನಾವಣೆ ಮುನ್ನಾದಿನ ಹಿಂದಿನ ಚುನಾವಣೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ನಿಕಾಲಿ ಮಾಡುತ್ತಾರೆ. ಇದರಿಂದಾಗಿ ನಮ್ಮ ಸದನದ ಧ್ವನಿ ಹಾಗೂ ಒಟ್ಟಾರೆ ಅಭಿಪ್ರಾಯವನ್ನು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ತಲುಪಿಸಬೇಕೆಂಬ ವಿವರವನ್ನು ಸಹ ಕಾಗೇರಿ ಅವರಿಗೆ ವಿವರಿಸಿದ್ದೇನೆ ಎಂದರು.

ಇವಿಎಂ ಮಷಿನ್ ಹ್ಯಾಕ್ ಮಾಡುವ ಬಗ್ಗೆ ಬಹಳಷ್ಟು ಜನರಿಗೆ ಅನುಮಾನವಿದೆ. ಇದನ್ನು ಹೋಗಲಾಡಿಸಬೇಕಾದ್ರೆ ಎಥಿಕಲ್ ಹ್ಯಾಕಥಾನ್ ಆಗಬೇಕು. ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಇದನ್ನು ಮಾಡಬೇಕು. ರಾಜ್ಯ ಚುನಾವಣಾ ಆಯೋಗ ನಮ್ಮ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನಾವು ಎಥಿಕಲ್ ಹ್ಯಾಕಥಾನ್ ಮಾಡಬಹುದು. ಇದನ್ನು ಮಾಡುವಂತೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೊಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿರುವುದಾಗಿ ಹೆಚ್​ ಕೆ ಪಾಟೀಲ್​ ಹೇಳಿದರು.

ಚುನಾವಣೆಗಳ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ‌. ಮತದಾರರಿಗೆ ಫೋನ್ ಪೇ ಮೂಲಕ ಹಣ ಕಳಿಸುವುದು ಒಂದು ವಿಧ. ಇದು ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ವಿವರಣೆ ನೀಡಿ ತಾವೊಂದು ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ಮನವಿ ಮಾಡಿದ್ದೇವೆ. ಕಾಣೆಯಾಗಿರುವ ಇವಿಎಂಗಳ ಪತ್ತೆಗೆ ಕೇಂದ್ರ ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಬೇಕು. ವಿಧಾನಸಭೆಯಲ್ಲಿ ನಾನು ಆಡಿದ ಮಾತುಗಳನ್ನು ಇಂದು ಮತ್ತೊಮ್ಮೆ ಅಧ್ಯಕ್ಷರ ಜೊತೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ಸುಧಾರಣೆಗೆ ಅಗತ್ಯವಿರುವ ಸಾಧ್ಯಾಸಾಧ್ಯತೆಗಳ ವಿವರವನ್ನು ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ. ಇದಕ್ಕೆ ಪೂರಕವಾಗಿ 2750 ಪುಟಗಳ ಕಾಗದ ಪತ್ರಗಳನ್ನು ಸಲ್ಲಿಕೆ ಮಾಡಿದ್ದೇನೆ. ಮನೊರಂಜನ್ ರಾಯ್ ಪಿಐಎಲ್ ಸಲ್ಲಿಕೆ ಮಾಡಿದ್ರು. ಇದಲ್ಲದೆ ಬೇರೆ ಬೇರೆ ವಿಭಾಗಗಳಲ್ಲಿ ಸಲ್ಲಿಸಿದ್ದ ಮಾಹಿತಿಯನ್ನು ವಿವರಿಸಿದ್ದೇನೆ. ನಾನು ಸಭಾಧ್ಯಕ್ಷರಿಗೆ 4 ಬೇಡಿಕೆಗಳನ್ನು ಪ್ರಮುಖವಾಗಿ ಸಲ್ಲಿಕೆ ಮಾಡಿದ್ದೇನೆ. ಈ ಬಗ್ಗೆ ಸಭಾಧ್ಯಕ್ಷರಿಗೆ ವಿಸ್ತೃತ ವಿವರಣೆ ನೀಡಿದ್ದೇನೆ ಎಂದು ಹೆಚ್​ ಕೆ ಪಾಟೀಲ್​ ವಿವರಿಸಿದರು.

ಇದನ್ನೂ ಓದಿ:ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತಾರೆ, ಇಲ್ಲದವರಿಗೆ ಏನು ಹಾಕಬೇಕು?: ಯತ್ನಾಳ್​

Last Updated : May 8, 2022, 5:35 PM IST

ABOUT THE AUTHOR

...view details