ಬೆಂಗಳೂರು: ನಗರದ ವೈಟ್ ಟಾಪಿಂಗ್ ರಸ್ತೆಗಳು ಮಳೆಗಾಲಕ್ಕೆ ಸೂಕ್ತ ಅಲ್ಲ ಎನ್ನುವುದು ಸಿಲಿಕಾನ್ ಸಿಟಿ ವಾಹನ ಸವಾರರ ಗೋಳಾದ್ರೆ, ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಗಳು ಪ್ರಯಾಣಿಕರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ ಎಂಬ ಆರೋಪ ಕೇಳಿ ಬಂದಿದೆ.
ತನಿಖೆಗೆ ಹೆದರಿ ವೈಟ್ ಟಾಪಿಂಗ್ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ರಾ ಗುತ್ತಿಗೆದಾರರು!?
ಬೆಂಗಳೂರು ನಗರದ ವೈಟ್ ಟಾಪಿಂಗ್ ರಸ್ತೆಗಳು ಮಳೆಗಾಲಕ್ಕೆ ಸೂಕ್ತ ಅಲ್ಲ ಎನ್ನುವುದು ಸಿಲಿಕಾನ್ ಸಿಟಿ ವಾಹನ ಸವಾರರ ಗೋಳಾದ್ರೆ, ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಗಳು ಪ್ರಯಾಣಿಕರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಆರ್.ವಿ. ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಅರ್ಧ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗಿದೆ. ಕೆಲವೆಡೆ ಅರ್ಧ ಡಾಂಬಾರ್ ರಸ್ತೆ ಇದ್ದು, ರಸ್ತೆ ಸಮತಟ್ಟಿಲ್ಲದೆ ಅಪಘಾತಕ್ಕೆ ಕಾರಣವಾಗ್ತಿದೆ ಎನ್ನಲಾಗಿದೆ.
ಇನ್ನು ಈ ಕುರಿತಂತೆ ಮೇಯರ್ ಗಂಗಾಂಬಿಕೆಯವರನ್ನ ಕೇಳಿದ್ರೆ, ಸರ್ಕಾರ ವೈಟ್ ಟಾಪಿಂಗ್ ರಸ್ತೆಯ ತನಿಖೆ ನಡೆಸುತ್ತಿರುವುದರಿಂದ ತನಿಖೆಗೆ ಹೆದರಿ ಕೆಲಸ ನಿಲ್ಲಿಸಿದ್ದಾರೆ. ತನಿಖೆ ಮಾಡಿದಾಗ ಏನಾಗುತ್ತೋ ಅನ್ನೋ ಗಾಬರಿಯಲ್ಲಿ ಕಾಂಟ್ರಾಕ್ಟರ್ಸ್ ಕೆಲಸ ಮಾಡ್ತಿಲ್ಲ. ಹೀಗೆಂದು ಅಧಿಕಾರಿಗಳು ಹೇಳ್ತಿದ್ದಾರೆ. ಈ ಕುರಿತು ಎರಡು ಮೂರು ದಿನದಲ್ಲಿ ಕ್ರಮ ಕೈಗೊಳ್ಳಲೇಬೇಕು. ಇಲ್ಲದಿದ್ರೆ ತಾತ್ಕಾಲಿಕವಾಗಿಯಾದ್ರು ಸರಿಪಡಿಸಲು ತಿಳಿಸುತ್ತೇನೆ ಎಂದರು.