ಕರ್ನಾಟಕ

karnataka

ಆದಿತ್ಯಾ ಆಳ್ವಾ ನಾಪತ್ತೆಯಾಗಲು ಕಾರಣವಾಯ್ತಾ ಸಿಸಿಬಿ ಮಾಡಿದ ಸಣ್ಣ ಎಡವಟ್ಟು?

By

Published : Sep 15, 2020, 2:40 PM IST

ಮಾಜಿ ಸಚಿವ ಜೀವರಾಜ್​ ಆಳ್ವ ಅವರ ಪುತ್ರ ಆದಿತ್ಯ ಆಳ್ವಾ ಪಾಸ್​ಪೋರ್ಟ್​​ ಮತ್ತು ವೀಸಾವನ್ನು ಅಧಿಕಾರಿಗಳು ರದ್ದುಪಡಿಸಿಲ್ಲ. ಆತನ ವಿರುದ್ಧ ಪ್ರಕರಣ ದಾಖಲಾಗಿ 11 ದಿನಗಳಾದರೂ ಆತನನ್ನು ಪತ್ತೆ ಹಚ್ಚದಿರುವುದೇ ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಡುತ್ತಿದೆ.

the-ccb-is-awkward
ಆದಿತ್ಯಾ ಆಳ್ವಾ

ಬೆಂಗಳೂರು:‌ಡ್ರಗ್ಸ್ ದಂಧೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಜೀವರಾಜ್​ ಆಳ್ವಾ ಪುತ್ರ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಆರೋಪಿಯ ಪಾಸ್​​ಪೋರ್ಟ್, ವೀಸಾ ರದ್ದುಪಡಿಸದೇ ಸಿಸಿಬಿ ಎಡವಟ್ಟಿಗೆ ದಾರಿ ಮಾಡಿಕೊಡುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಪಾಸ್​ಪೋರ್ಟ್, ವೀಸಾ ರದ್ದು ‌ಮಾಡಿದ್ದರೆ ಆದಿತ್ಯ ದೇಶ ಬಿಡುತ್ತಿರಲಿಲ್ಲ. ಆತನ ವಿರುದ್ಧ ಕಾಟನ್ ಪೇಟೆ ಪೊಲೀಸ್​​ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿ 11 (ಸೆ.4ರಂದು ಪ್ರಕರಣ ದಾಖಲಾಗಿದೆ) ದಿನಗಳಾದರೂ ಇನ್ನೂ ಪತ್ತೆಯಾಗಿಲ್ಲ. ಆಳ್ವಾ ಐಷಾರಾಮಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಥಾಯ್ಲೆಂಡ್​ನಲ್ಲೂ ಪಾರ್ಟಿ ಮಾಡುತ್ತಿದ್ದ ಎನ್ನಲಾಗಿದೆ.

ಆದಿತ್ಯ ಎಲ್ಲಿದ್ದಾರೆ ಬಗ್ಗೆ ನನಗೂ ಗೊತ್ತಿಲ್ಲ. ಅವರು ಯಾವುದೇ ರೀತಿಯ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲ. ಕೊರೊನಾ ಕಾಣಿಸಿಕೊಂಡ ನಂತರ ಅವರು ನನಗೆ ಸಿಕ್ಕಿಲ್ಲ. ‌ಸಿಸಿಬಿ ಅಧಿಕಾರಿಗಳು ನನ್ನನ್ನೂ ಕರೆಸಿ ವಿಚಾರಣೆ ನಡೆಸಿದ್ದಾರೆ. ಗೊತ್ತಿದ್ದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಆದಿತ್ಯನ ಸೆಕ್ಯೂರಿಟಿ ಮ್ಯಾನೇಜರ್ ಸ್ಟ್ಯಾನ್ಲಿ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.

ABOUT THE AUTHOR

...view details