ಕರ್ನಾಟಕ

karnataka

ETV Bharat / city

ಕಟೀಲ್​ ಜನರನ್ನ ಕೆರಳಿಸುತ್ತಿದ್ದಾರೆ: ವಿ.ಎಸ್.ಉಗ್ರಪ್ಪ ಆಕ್ರೋಶ

ಕೇಂದ್ರ ಸರ್ಕಾರದ ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಮಾಡಿರುವ ಆರೋಪಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬಾರಿ ದಂಡ ಜನರಿಗೆ ಹೊರೆ.. ಕಟೀಲ್​ ಜನರನ್ನ ಕೆರಳಿಸುವ ಹೇಳಿಕೆ ನೀಡಿದ್ದಾರೆ: ವಿ.ಎಸ್.ಉಗ್ರಪ್ಪ ಆಕ್ರೋಶ

By

Published : Sep 9, 2019, 8:17 PM IST


ಬೆಂಗಳೂರು: ಕೇಂದ್ರ ಸರ್ಕಾರದ ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಮಾಡಿರುವ ಆರೋಪಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬಾರಿ ದಂಡ ಜನರಿಗೆ ಹೊರೆ.. ಕಟೀಲ್​ ಜನರನ್ನ ಕೆರಳಿಸುವ ಹೇಳಿಕೆ ನೀಡಿದ್ದಾರೆ: ವಿ.ಎಸ್.ಉಗ್ರಪ್ಪ ಆಕ್ರೋಶ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಮೋಟಾರು ವಾಹನ ಕಾಯ್ದೆ ಅವೈಜ್ಞಾನಿಕವಾಗಿದೆ. ಕೇಂದ್ರದ ಆದೇಶವನ್ನ ರಾಜ್ಯದಲ್ಲೂ ತರಲಾಗಿದೆ. ಈ ದಂಡ ವಸೂಲಿ ರೈತರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಡ ವಾಹನ ಸವಾರರ ಮೇಲೂ ಬರೆ ಬಿದ್ದಿದೆ. ಬೆಂಗಳೂರಿನಲ್ಲಿ ಸುಮಾರು 1 ಕೋಟಿ ವಾಹನಗಳಿವೆ. ಟ್ರಾಫಿಕ್ ಉಲ್ಲಂಘನೆ ಮಾಡುವುದು ಅಪರಾಧ. ಉಲ್ಲಂಘನೆಯ ನೆಪದಲ್ಲಿ ಬಾರಿ ದಂಡ ವಿಧಿಸಿದ್ದು, ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಸ್ತೆ ಗುಂಡಿಗೂ,ದಂಡಕ್ಕೂ ಸಂಬಂಧವಿಲ್ಲ ಅಂತಾರೆ. ಸಾರಿಗೆ ಸಚಿವರು ಉದ್ಧಟತನದ ಹೇಳಿಕೆ ಸರಿಯಲ್ಲ. ರಸ್ತೆಗಳು ಸರಿಯಿದ್ದರೆ, ಯಾಕೆ ಅಪಘಾತಗಳು ಆಗುತ್ತವೆ. ಅಪಘಾತ ಆದರೆ, ತಾನೇ ಕಾನೂನು ಉಲ್ಲಂಘನೆಯಾಗೋದು. ಸುರಕ್ಷಿತ ಪ್ರಯಾಣಕ್ಕೆ ರಸ್ತೆ ಗುಣಮಟ್ಟವೂ ಮುಖ್ಯವಲ್ವೇ. ಇದು ನಮ್ಮ ಸಾರಿಗೆ ಸಚಿವರಿಗೆ ಗೊತ್ತಿಲ್ಲವೇ? ಎಂದು ಲಕ್ಷ್ಮಣ್ ಸವದಿ ಹೇಳಿಕೆಗೆ ಉಗ್ರಪ್ಪ ಮರು ಪ್ರಶ್ನಿಸಿದ್ರು.

ಸಂಚಾರ ಪೊಲೀಸರಿಗೆ ದಂಡ ವಸೂಲಿ ಅತ್ಯಂತ ಪ್ರಮುಖ ಕೆಲಸವಾಗಿದೆ. ಹೆಚ್ಚು ದಂಡದಿಂದ ಭ್ರಷ್ಟಾಚಾರಕ್ಕೂ ಅವಕಾಶ ಸಿಕ್ಕಂತಾಗಿದೆ. 100 ಇದ್ದರೆ, 200 ರೂ. ದಂಡ ಹೆಚ್ಚಿಸಲಿ. ಅದು ಬಿಟ್ಟು 1 ಸಾವಿರ ಮಾಡಿದರೆ ಹೇಗೆ? ಬಡ ಕಾರ್ಮಿಕ, ರೈತನ ನೋವು ಯಾರಿಗೆ ಹೇಳಬೇಕು. ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಲಿ. ಅದು ಬಿಟ್ಟು ದಂಡ ಹೆಚ್ಚಿಸಿದ್ದು ಸರಿಯಲ್ಲ. ಕೂಡಲೇ ಹೆಚ್ಚಿಸಿರುವ ದಂಡವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ನಳಿನ್ ಕುಮಾರ್ ಕಟೀಲ್​ ಜನರನ್ನ ಕೆರಳಿಸಿದ್ದಾರೆ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಜನರನ್ನ ಕೆರಳಿಸುವ ಹೇಳಿಕೆ ನೀಡುವವರು. ದಕ್ಷಿಣ ಕನ್ನಡದಲ್ಲಿ ಬೆಂಕಿ‌ ಹಚ್ಚುತ್ತೇವೆ ಅಂದವರು. ಇಂತವರು ಡಿಕೆಶಿ ವಿಚಾರದಲ್ಲಿ ಅಪ್ರಭುದ್ಧ ಹೇಳಿಕೆ ನೀಡಿದ್ದಾರೆ. ಅವರು ಮಾತನಾಡಬೇಕು ಅಂತ ಹೇಳಿಕೆ ನೀಡ್ತಾರೋ ಏನೋ ಗೊತ್ತಿಲ್ಲ. 2017ರಲ್ಲಿ ಕೇಂದ್ರದಲ್ಲಿ ಯಾರ ಸರ್ಕಾರ ಇತ್ತು. ಐಟಿ, ಇಡಿ ಯಾರ ಅಧೀನಕ್ಕೆ ಬರುತ್ತವೆ. ಇದು ಕಟೀಲ್ ಅವರಿಗೆ ಗೊತ್ತಿಲ್ಲವೇ? ಸಂಸದರಾಗಿ ನಿಮಗೆ ಅದೇ ಗೊತ್ತಿಲ್ಲದಿದ್ದರೆ ಹೇಗೆ? ಯಡಿಯೂರಪ್ಪ ಮೇಲಿನ ಕೇಸ್ ಕ್ಲೋಸ್ ಆಗ್ತಿವೆ. 300 ಕೋಟಿಯ ಪ್ರಹ್ಲಾದ್ ಜೋಶಿ ತಮ್ಮನ ಕೇಸ್ ವಜಾ ಆಗ್ತಿದೆ.

ಅಮಿತ್ ಶಾ ಮೇಲಿದ್ದ ಎನ್ ಕೌಂಟರ್ ಕೇಸ್ ಕ್ಲೋಸ್​ ಆಗಿದೆ. ಆದರೆ, ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಹಾಕಲಾಗ್ತಿದೆ. ಚಿದಂಬರಂ, ಡಿಕೆಶಿ ಇನ್ನಿತರರ ಮೇಲೆ ಕೇಸ್ ಹಾಕಿದ್ದಾರೆ. ಆರ್ಥಿಕ ಅಪರಾಧ ಮಾಡಿದ್ದರೆ, ತನಿಖೆ ನಡೆಸಿ. ತಪ್ಪಿದ್ದರೆ ನೀವು ಕ್ರಮ ತೆಗೆದುಕೊಳ್ಳಿ. ಆದರೆ ದ್ವೇಷರಾಜಕಾರಣಕ್ಕೆ ಯಾಕೆ ಕೇಸ್ ಹಾಕ್ತಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದರು. ಡಿಕೆಶಿ ಮೇಲೆ ಸುಮೋಟು ಕೇಸ್ ಹಾಕಿದ್ದೀರಾ, ಶ್ರೀನಿವಾಸ್ ಗೌಡ ಅಸೆಂಬ್ಲಿಯಲ್ಲಿ 5 ಕೋಟಿ ಲಂಚದ ಆರೋಪ ಮಾಡಿದ್ದಾರೆ. ಅದರ ಬಗ್ಗೆ ಸುಮೋಟು ಕೇಸ್ ಯಾಕೆ ಹಾಕಲಿಲ್ಲ. ಯಡಿಯೂರಪ್ಪ ಆಡಿಯೋ ಪ್ರಕರಣದ ಮೇಲೆ ಇಡಿ ಯಾಕೆ ಕೇಸ್ ದಾಖಲಿಸಲಿಲ್ಲ? ಐಟಿ, ಇಡಿ ದುರುಪಯೋಗವಾಗುತ್ತಿಲ್ಲವೇ. ಈಗಾಗಲೇ ನಮ್ಮ ರಾಜ್ಯ ನಾಯಕರುಗಳು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದರು.

ABOUT THE AUTHOR

...view details