ಕರ್ನಾಟಕ

karnataka

ETV Bharat / city

ಬಿಎಂಟಿಸಿ ಚಾಲಕ-ನಿರ್ವಾಹಕರಿಗೆ ಇನ್ನೂ ಸಿಕ್ಕಿಲ್ಲ ತಿಂಗಳ ವೇತನ... ಕಮರಿದ ಹಬ್ಬದ ಸಂಭ್ರಮ - Ayudha pooja celebration

ರಜಾ ದಿನಗಳಲ್ಲೂ ರಾತ್ರಿ ಹಗಲು ದುಡಿಯುವ ಬಿಎಂಟಿಸಿ ಬಸ್‌ ಚಾಲಕ, ನಿರ್ವಾಹಕರಿಗೆ ಸೆಪ್ಟೆಂಬರ್​ ತಿಂಗಳ ವೇತನ ಸಿಗದೆ ಪರದಾಡುವಂತಾಗಿದೆ.

the-bmtc-was-not-paid-salary

By

Published : Oct 7, 2019, 8:22 PM IST

Updated : Oct 7, 2019, 9:03 PM IST

ಬೆಂಗಳೂರು: ರಾಷ್ಟ್ರೀಯ, ಧಾರ್ಮಿಕ ಹಬ್ಬಗಳು ಸೇರಿದಂತೆ ಎಲ್ಲಾ ರಜಾ ದಿನಗಳಲ್ಲಿ ದುಡಿಯುವ ಬಿಎಂಟಿಸಿ ಬಸ್‌ ಚಾಲಕ, ನಿರ್ವಾಹಕರಿಗೆ ಈ ಬಾರಿ ತಿಂಗಳ ವೇತನ ಸಿಗದೆ ಆಯುಧ ಪೂಜೆ ಸಂಭ್ರಮವೇ ಕಮರಿ ಹೋಗಿದೆ.

ಆಡಳಿತ ವರ್ಗವನ್ನು ಕೇಳಿದರೆ ಸಾಲು ಸಾಲು ರಜೆ ಇರುವ ಕಾರಣ ವೇತನ ವಿಳಂಬವಾಗುತ್ತಿದೆ ಎಂದು ತಿಳಿಸಿದೆ. ಬಿಎಂಟಿಸಿ ಆಡಳಿತ ವರ್ಗವು ಆಯುಧ ಪೂಜೆಗೆ ಪ್ರತಿ ಬಸ್​ನ ಪೂಜೆಗೆ ಕೇವಲ ₹ 100 ನೀಡಿದ್ದು, ಇತ್ತ ಸಂಬಳವೂ ಇಲ್ಲದೇ ಈ ದುಬಾರಿ ದುನಿಯಾದಲ್ಲಿ ಸಂಸ್ಥೆ ನೀಡಿರುವ ₹100 ಪೂಜೆ ಮಾಡಲು ಸಾಧ್ಯವಾಗುತ್ತಾ ಎಂಬ ಪ್ರಶ್ನೆ‌ ಉದ್ಭವಿಸಿದೆ.

ಮೆಕ್ಯಾನಿಕ್​ಗಳಿಗೆ 1ರಂದು, ಚಾಲಕರಿಗೆ 6ರಂದು, ನಿರ್ವಾಹಕರಿಗೆ 9ನೇ ತಾರೀಖಿನಂದು ವೇತನ ಆಗಬೇಕಿತ್ತು. ಆದರೆ ಸೆಪ್ಟೆಂಬರ್ ತಿಂಗಳ ವೇತನ 10ರಂದು ಆಗಲಿದೆ ಎನ್ನಲಾಗಿದೆ.

Last Updated : Oct 7, 2019, 9:03 PM IST

ABOUT THE AUTHOR

...view details