ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ನಡುವೆ ಬಿಜೆಪಿ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಬಿಜೆಪಿ ಸಿಡಿ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ: ಖಾದರ್ - ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ
ಎಸ್‌ಐಟಿಗೆ ಸಂಪೂರ್ಣ ಸಹಕಾರ ನೀಡಿ ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶ ಕೊಡಿ. ತನಿಖೆ ರಿಪೋರ್ಟ್ ಬರುವವರೆಗೂ ಕಾಯುವುದು ಬಿಟ್ಟು ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಬೇಡ ಎಂದು ಖಾದರ್ ಹೇಳಿದರು.
![ಬಿಜೆಪಿ ಸಿಡಿ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ: ಖಾದರ್ the-bjp-is-working-to-avert-the-cd-case-ut-khader](https://etvbharatimages.akamaized.net/etvbharat/prod-images/768-512-11030829-thumbnail-3x2-fjhg.jpg)
ಯುಟಿ ಖಾದರ್
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸ್‌ಐಟಿಗೆ ಸಂಪೂರ್ಣ ಸಹಕಾರ ನೀಡಿ ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶ ಕೊಡಿ. ತನಿಖೆ ರಿಪೋರ್ಟ್ ಬರುವವರೆಗೂ ಕಾಯುವುದು ಬಿಟ್ಟು ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಬೇಡ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್
ಆ ಹುಡುಗಿ ಇಂತಹವರೇ ಇದ್ದಾರೆಂದು ಹೇಳಿಲ್ಲ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜ್ಯ ಬಿಜೆಪಿ ಘಟಕ ಈ ರೀತಿ ಟೈಟ್ ಮಾಡ್ತಿದೆ. ಇದರಲ್ಲಿ ಇವರು ಯಶಸ್ವಿಯಾಗುವುದಿಲ್ಲ. ಆದಷ್ಟು ಶೀಘ್ರ ಸರ್ಕಾರ ಎಸ್ಐಟಿ ಬದಲು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.