ಕರ್ನಾಟಕ

karnataka

ETV Bharat / city

ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಟು ಸುಭದ್ರ: ಎಸ್​​.ಟಿ.ಸೋಮಶೇಖರ್​​​ - ಯಶವಂತಪುರ ಉಪಚುನಾವಣೆ ಪ್ರಚಾರ

ಅವಕಾಶ ಇದ್ದಾಗಲೇ ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಈಗ ಮತ್ತೆ ಮೈತ್ರಿ ಅನ್ನೋದೆಲ್ಲ ಸುಳ್ಳು. ಕೇವಲ ಮತದಾರರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶ ಬಂದ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಟು ಸುಭದ್ರವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದರು.

ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್  ಯಶವಂತಪುರ ಚುನಾವಣಾ ಪ್ರಚಾರ
ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಯಶವಂತಪುರ ಚುನಾವಣಾ ಪ್ರಚಾರ

By

Published : Dec 2, 2019, 5:50 PM IST

Updated : Dec 2, 2019, 7:18 PM IST

ಬೆಂಗಳೂರು:ಅವಕಾಶ ಇದ್ದಾಗಲೇ ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಈಗ ಮತ್ತೆ ಮೈತ್ರಿ ಅನ್ನೋದೆಲ್ಲ ಸುಳ್ಳು. ಕೇವಲ ಮತದಾರರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶ ಬಂದ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಟು ಸುಭದ್ರವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದರು.

ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್

ಯಶವಂತಪುರ ಉಪ ಸಮರದ ಪ್ರಚಾರದ ವೇಳೆ ಮಾತನಾಡಿದ ಅವರು, ಈಗಂತೂ ಸಿಎಂ ಹುದ್ದೆ ಖಾಲಿ ಇಲ್ಲ. ಕಾಂಗ್ರೆಸ್-ಜೆಡಿಎಸ್​​ನವರಿಗೆ ಆ ಅವಕಾಶವೂ ಇಲ್ಲ. ಮೈತ್ರಿ ಸರ್ಕಾರ ಇದ್ದಾಗ ಮುನಿರತ್ನ ನನ್ನ ಫೋನ್ ಟ್ಯಾಪ್ ಮಾಡಿಸಿದ್ರು. ನಿರ್ಮಲಾನಂದ ಸ್ವಾಮೀಜಿ ಫೋನ್ ಸಹ ಹಿಂದಿನ ಸಿಎಂ ಟ್ಯಾಪ್‌ ಮಾಡಿಸಿದ್ರು. ನಮ್ಮ ಒಕ್ಕಲಿಗ ಸಮುದಾಯದ ಸ್ವಾಮೀಜಿ ಫೋನ್ ಟ್ಯಾಪ್ ಮಾಡಿಸಿದ್ದು ಸರಿಯಲ್ಲ. ನಿರ್ಮಲಾನಂದನಾಥ ಸ್ವಾಮೀಜಿ ಒಂದು ಪಕ್ಷಕ್ಕೆ ಸೀಮೀತರಾದವರಲ್ಲ ಎಂದು ಹೇಳಿದರು.

ನೂರಕ್ಕೆ ನೂರು ಮೈತ್ರಿ ಸರ್ಕಾರ ರಚನೆ ಆಗೋದಿಲ್ಲ. ಮೈತ್ರಿ ಸರ್ಕಾರ ಇದ್ದಾಗ ಕಿತ್ತಾಡಿಕೊಂಡ್ರು. ಈಗ ಮತ್ತೆ ಮೈತ್ರಿ ಅನ್ನೋದು ಯಾವ ದೃಷ್ಟಿಯಿಂದ ಎಂದು ಪ್ರಶ್ನಿಸಿದರು.

Last Updated : Dec 2, 2019, 7:18 PM IST

ABOUT THE AUTHOR

...view details